ಹಲ್ಲು ನೋವು ಅತ್ಯಂತ ಯಾತನಾಮಯವಾಗಿರುತ್ತದೆ. ಹಲ್ಲು ನೋವು ಶುರುವಾಯ್ತು ಅಂದ್ರೆ ಊಟ ತಿಂಡಿ ಮಾಡೋದು ಕೂಡ ಬಹಳ ಕಷ್ಟ. ಬ್ಯಾಕ್ಟೀರಿಯಾ ಸೋಂಕು, ಕ್ಯಾಲ್ಸಿಯಂ ಕೊರತೆ ಅಥವಾ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು ನೋವಿಗೆ ಕಾರಣ ಇರಬಹುದು.
ಈರುಳ್ಳಿ, ಈ ಹಲ್ಲುನೋವನ್ನು ಹೋಗಲಾಡಿಸುತ್ತದೆ ಅಂದ್ರೆ ನೀವು ನಂಬಲೇಬೇಕು. ಈರುಳ್ಳಿ ಮತ್ತು ನಿಂಬೆಯನ್ನು ಒಟ್ಟಿಗೆ ಬಳಸುವುದರಿಂದ ಅನೇಕ ಹಲ್ಲಿನ ಸಮಸ್ಯೆಗಳನ್ನು ನಿವಾರಿಸಬಹುದು. ಒಂದು ಬಟ್ಟಲಿನಲ್ಲಿ ಉಪ್ಪು ಮತ್ತು ನಿಂಬೆ ರಸದ ಮಿಶ್ರಣವನ್ನು ತಯಾರಿಸಿ. ಅದರಲ್ಲಿ ಈರುಳ್ಳಿ ತುಂಡುಗಳನ್ನು ಅದ್ದಿ ನೋವಿರುವ ಹಲ್ಲುಗಳಿಗೆ ಚೆನ್ನಾಗಿ ಉಜ್ಜಿ. ಹೀಗೆ ಮಾಡುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ.
ಹಸಿ ಈರುಳ್ಳಿ ತಿಂದ್ರೆ ಬಾಯಿ ಗಬ್ಬು ವಾಸನೆ ಬರುತ್ತದೆ. ಹಾಗಾಗಿ ಹಲ್ಲು ನೋವು ಬಂದಾಗ್ಲೂ ಈರುಳ್ಳಿ ಬಳಸಿದ್ರೆ ಬಾಯಿ ವಾಸನೆಯಾಗಬಹುದು ಅನ್ನೋ ಆತಂಕ ಇದ್ದೇ ಇರುತ್ತದೆ. ಆದ್ರೆ ಈರುಳ್ಳಿ ಜೊತೆಗೆ ನೀವು ಉಪ್ಪನ್ನು ಬಳಸ್ತಾ ಇರೋದ್ರಿಂದ ನಿಮ್ಮ ಹಲ್ಲುಗಳು ಸಂಪೂರ್ಣವಾಗಿ ಸ್ವಚ್ಛವಾಗುತ್ತವೆ. ಹಲ್ಲು ನೋವು ಕೂಡ ಕಡಿಮೆಯಾಗುತ್ತದೆ. ಈರುಳ್ಳಿಯನ್ನು ಎರಡು ಹೋಳಾಗಿ ಮಾಡಿಕೊಳ್ಳಿ. ಅದರ ಮೇಲೆ ಉಪ್ಪು ಮತ್ತು ನಿಂಬೆ ರಸದ ಮಿಶ್ರಣವನ್ನು ಸವರಿಕೊಂಡು ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ.