alex Certify ಕೂದಲಿಗೆ ಹಚ್ಚಿದ ಕಲರ್ ತೆಗೆಯಲು ಇದನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿಗೆ ಹಚ್ಚಿದ ಕಲರ್ ತೆಗೆಯಲು ಇದನ್ನು ಬಳಸಿ

ಮಹಿಳೆಯರು ಹೆಚ್ಚಾಗಿ ಸಮಾರಂಭಗಳಿಗೆ ಹೋಗುವಾಗ ಕೂದಲು ಆಕರ್ಷಕವಾಗಿ ಕಾಣಲು ಕೇಶ ವಿನ್ಯಾಸದ ಜೊತೆಗೆ ಹೇರ್ ಕಲರ್ ಮಾಡುತ್ತಾರೆ. ಆದರೆ ಕೆಲವೊಮ್ಮೆ  ಹಚ್ಚಿದ ಹೇರ್ ಕಲರ್ ಚೆನ್ನಾಗಿ ಕಾಣಿಸದಿದ್ದಾಗ ಅದನ್ನು ಬದಲಾಯಿಸಲು ಬಯಸುತ್ತಾರೆ. ಅಂತಹ ವೇಳೆ ಕೂದಲಿಗೆ ಹಚ್ಚಿದ ಬಣ್ಣವನ್ನು ತೆಗೆಯಲು ಇದನ್ನು ಬಳಸಿ.

ವೈಟ್ ವಿನೆಗರ್ ಮತ್ತು ಆಪಲ್ ಸೈಡರ್ ವಿನೆಗರ್ ಎರಡೂ ಕೂದಲಿನ ಬಣ್ಣ ತೆಗೆಯಲು ಬಹಳ ಸಹಕಾರಿಯಾಗಿದೆ. ಹಾಗಾಗಿ ಕೂದಲಿನ ಬಣ್ಣವನ್ನು ತೆಗೆಯಲು ವೈಟ್ ವಿನೆಗರ್ ಮತ್ತು ಬಿಸಿ ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಕವರ್ ಮಾಡಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಕೂದಲಿನಲ್ಲಿ ವಾಸನೆ ಕಂಡು ಬಂದರೂ ಅದು ಸ್ವಲ್ಪ ಸಮಯದಲ್ಲೇ ನಿವಾರಣೆಯಾಗುತ್ತದೆ.

 ಹಾಗೇ ಆಪಲ್ ಸೈಡರ್ ವಿನೆಗರ್ ಬಳಸಿ ಕೂದಲಿನ ಬಣ್ಣ ತೆಗೆಯುವುದಾದರೆ ಒಂದು ಪ್ರಮಾಣದಲ್ಲಿ ಆಪಲ್ ಸೈಡರ್ ವಿನೆಗರ್ ನ್ನು ತೆಗೆದುಕೊಂಡು ಅದರ 2 ಪ್ರಮಾಣದಷ್ಟು ನೀರಿಗೆ ಸೇರಿಸಬೇಕು. ಬಳಿಕ ಕೂದಲನ್ನು ತೊಳೆದು ಕಂಡೀಷನರ್ ಮಾಡಿದ ಬಳಿಕ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದರಿಂದ ಕೂದಲಿಗೆ ಹಚ್ಚಿದ ಕಲರ್ ಹೋಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...