ಬೆಂಗಳೂರು: ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಹೇಳುತ್ತಾರೆ. ಆದರೆ ಬಿಸಿ ನೀರನ್ನು ಕುಡಿಯುವುದರಿಂದ ಆರೋಗ್ಯ ಬರುವುದಿಲ್ಲ. ಬಿಸಿ ನೀರನ್ನು ಬೇರೆ ರೀತಿಯಲ್ಲಿ ಉಪಯೋಗಿಸುವುದರಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಬಹುದು. ಉತ್ತಮ ಆರೋಗ್ಯಕ್ಕಾಗಿ ಬಿಸಿ ನೀರಿನ ಈ ಒಂದು ವಿಧಾನವನ್ನು ಅನುಸರಿಸುವುದು ಒಳ್ಳೆಯದು ಎಂಬ ಮಹತ್ವದ ಸಲಹೆಯನ್ನು ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾರಾದರೂ ಮನೆಯ ಹೊರಗಿನಿಂದ ಬಂದರೆ ಅವರಿಗೆ ಬಿಸಿ ನೀರು ಕೊಡುತ್ತಿದ್ದರು. ಬಿಸಿ ನೀರಿನಲ್ಲಿ ಕಾಲು ತೊಳೆದು ಬರಬೇಕು ಎಂಬ ಪದ್ಧತಿ ಇತ್ತು. ಈ ಪದ್ಧತಿಯ ಹಿಂದೆ ವೈಜ್ಞಾನಿಕವಾದ ಕಾರಣವೂ ಇತ್ತು. ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶವೂ ಇತ್ತು. ಹೊರಗಿನಿಂದ ಬಂದರೆ ಧೂಳು ಇತ್ಯಾದಿ ತುಳಿದುಬರುವುದರಿಂದ ಇನ್ಫೆಕ್ಷನ್ ಆಗಬಾರದು, ಆರೋಗ್ಯ ಕಾಪಾಡಬೇಕು ಎಂಬ ಅಂಶ ಇದರಲ್ಲಿ ಅಡಕವಾಗಿತ್ತು.
ನಮ್ಮ ದೇಹದಲ್ಲಿ ತಲೆಯಿಂದ ಕಾಲಿನವರೆಗೂ ನರಗಳಿರುತ್ತವೆ. ನಮ್ಮ ಬ್ರೇನಿಂದ ಹಿಡಿದು ಪಾದಗಳವರೆಗೂ ನರಗಳಿದ್ದು, ನರಗಳು ಪಾದದಲ್ಲಿ ಕೊನೆಗೊಳ್ಳುತ್ತವೆ. ನಮ್ಮ ಅಂಗಾಂಗದ ಪ್ರತಿ ನರವೂ ಕೊನೆಗೊಳ್ಳುವುದು ಪಾದದಲ್ಲಿ. ಹಾಗಾಗಿ ಪಾದದಲ್ಲಿ ಪ್ರೆಶರ್ ಪಾಯಿಂಟ್ ಇರುವುದರಿಂದ ಪಾದಗಳನ್ನು ಒತ್ತಿದರೆ ರಿಲ್ಯಾಕ್ಸ್ ಆಗುತ್ತದೆ… ದೇಹದಲ್ಲಿನ ಯಾವುದೇ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ನಮ್ಮ ಪಾದಗಳಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗದ ಪ್ರಮುಖ ಕೇಂದ್ರ ಇರುತ್ತದೆ. ಹಿಂದಿನ ಕಾಲದಲ್ಲಿ ಹೊರಗಿನಿಂದ ಬಂದರೆ ಬಿಸಿ ನೀರು ಇಡುತ್ತಿದ್ದರು. ಆದರೆ ಇಂದಿನ ಆಧುನಿಕ ಜೀವನ ಶೈಲಿ, ಒತ್ತಡದ ಬದುಕಿನಲ್ಲಿ ಎಲ್ಲರೂ ಬ್ಯುಸಿ. ಯಾರಿಗೂ ಸಮಯವೇ ಇಲ್ಲ ಎಂಬ ಸ್ಥಿತಿ. ಇಂತಹ ಬ್ಯುಸಿ ಲೈಫ್ ನಲ್ಲಿಯೂ ಬಿಸಿ ನೀರಿನಲ್ಲಿ ಈ ವಿಧಾನ ಅನುಸರಿಸಿ ಕಾಲು ತೊಳೆಯುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ನೀವು ಮನೆಯಿಂದ ಹೊರ ಹೋಗಿ ಬಂದರೆ ಮೊದಲು ಬಿಸಿ ನೀರಿನಲ್ಲಿ ಕಾಲು ತೊಳೆಯುವುದು ಉತ್ತಮ. ರಾತ್ರಿ ಮಲಗುವ ಮುನ್ನ ಒಂದು ಟಬ್ ನಲ್ಲಿ ಬಿಸಿ ನೀರು, ಇನ್ನೊಂದು ಟಬ್ ನಲ್ಲಿ ನಾರ್ಮಲ್ ನೀರನ್ನು ಇಟ್ಟು, ಬಿಸಿ ನೀರಿನ ಟಬ್ ನಲ್ಲಿ 30 ಸೆಕೆಂಡ್ ಹಾಗೂ ನಾರ್ಮಲ್ ನೀರಿನ ಟಬ್ ನಲ್ಲಿ 30 ಸೆಕೆಂಡ್ ನಿಮ್ಮ ಪಾದಗಳನ್ನು ಇಡಿ. ಹೀಗೆ 10 ನಿಮಿಷಗಳ ಕಾಲ ಮಾಡಿ. ಹೀಗೆ ಮಾಡುವುದರಿಂದ ನಿಮ್ಮಪಾದಗಳಿಗೂ ಉತ್ತಮ ವ್ಯಾಯಾಮವಾದಂತಾಗುತ್ತದೆ. ಜೊತೆಗೆ ಮೈಂಡ್ ರಿಲ್ಯಾಕ್ಸ್ ಆಗುತ್ತದೆ. ದೇಹದಲ್ಲಿನ ಮಸಲ್ಸ್ ರಿಲ್ಯಾಕ್ಸ್ ಆಗುತ್ತದೆ. ಉತ್ತಮ ನಿದ್ದೆ ಬರಲು ಅನುಕೂಲವಾಗುತ್ತದೆ.
ಒಂದು ವೇಳೆ ಡಯಾಬಿಟೀಸ್ ಇದ್ದವರೂ ಈ ರೀತಿಯ ವಿಧಾನ ಅನುಸರಿಸಬಹುದು. ಡಯಾಬಿಟೀಸ್ ಇರುವವರಲ್ಲಿ ಸಾಮಾನ್ಯವಾಗಿ ಪಾದಗಳು ಉರಿಯುವುದು, ನಿದ್ರಾಹೀನತೆ ಸಮಸ್ಯೆ ಹೆಚ್ಚು. ಇಂತಹ ಸಮಸ್ಯೆ ಇರುವವರು ಕೂಡ ಹೀಗೆ ಬಿಸಿ ಹಾಗೂ ನಾರ್ಮಲ್ ನೀರಿನಲ್ಲಿ ಪಾದ ಇಡುವುದರಿಂದ ಪಾದ ಉರಿ, ನಿದ್ರೆಯ ಸಮಸ್ಯೆ ಕ್ರಮೇಣ ಕಡಿಯಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಬಿಸಿ ನೀರನ್ನು ಯಾವ ರೀತಿ ಉಪಯೋಗಿಸಬೇಕು ಎಂಬ ಅದ್ಭುತ ಆರೋಗ್ಯ ಸಲಹೆಯನ್ನು ನೀಡಿದ್ದಾರೆ. ನೀವೂ ಕೂಡ ಈ ಸಲಹೆ ಪಾಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.