ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿ ಅಂಶವಿದೆ. ಇದು ಕೂದಲಿಗೆ ತುಂಬಾ ಒಳ್ಳೆಯದು, ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದು ಚರ್ಮವನ್ನು ದೀರ್ಘಕಾಲದವರೆಗೆ ಯೌವನವಾಗಿರಲು ಸಹಾಯ ಮಾಡುತ್ತದೆ. ಹಾಗಾಗಿ ನೆಲ್ಲಿಕಾಯಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.
*2 ನೆಲ್ಲಿಕಾಯಿ ತುರಿದು ರಸ ತೆಗೆಯಿರಿ. ಬಳಿಕ 1 ಕಪ್ ಪಪ್ಪಾಯಿ ಬೇಯಿಸಿ ಪೇಸ್ಟ್ ತಯಾರಿಸಿ ಎರಡನ್ನು ಮಿಕ್ಸ್ ಮಾಡಿ. ಇದನ್ನು ಹತ್ತಿಯ ಸಹಾಯದಿಂದ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಚರ್ಮ ಹೊಳೆಯುತ್ತದೆ.
*2 ಚಮಚ ಆಮ್ಲಾ ಪೇಸ್ಟ್, 1 ಚಮಚ ಮೊಸರು, 1 ಚಮಚ ಜೇನುತುಪ್ಪ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 5 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಬಳಸಿ.