ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ ಸೇವಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ.
ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ಕುದಿಸಿದ ನೀರನ್ನು ಕುಡಿಯುವುದ್ರಿಂದ ಮಲಬದ್ಧತೆ, ಎಸಿಡಿಟಿ ಹಾಗೂ ಆಯಾಸ ಸಮಸ್ಯೆ ಕಡಿಮೆಯಾಗುತ್ತದೆ.
ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. ಇದು ದೇಹದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಒಣದ್ರಾಕ್ಷಿ ಕುದಿಸಿಟ್ಟ ನೀರು ಮುಖದ ಮೇಲಿನ ಸುಕ್ಕನ್ನು ಕಡಿಮೆ ಮಾಡಿ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ.
ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತದೆ.
ಪ್ರತಿದಿನ ಈ ನೀರು ಕುಡಿಯುವುದ್ರಿಂದ ಲಿವರ್ ಆರೋಗ್ಯವಾಗಿರುತ್ತದೆ. ಚಯಾಪಚಯ ಮಟ್ಟವನ್ನು ನಿಯಂತ್ರಿಸುತ್ತದೆ.