ಸುಂದರವಾದ, ಮೃದುವಾದ ಚರ್ಮ ತಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಕ್ರೀಂಗಳನ್ನು ಬಳಸುತ್ತಾರೆ. ಇದರ ಬದಲು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೊತ್ತಂಬರಿ ಬೀಜ ನಿಮ್ಮ ಚರ್ಮವನ್ನು ಮೃದುವಾಗಿಸಲು ತುಂಬಾ ಸಹಕಾರಿಯಾಗಿದೆ. ಹೇಗೆ ಬಳಸಬೇಕು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
*ಡೆಡ್ ಸ್ಕಿನ್ ನಿವಾರಿಸಲು ಕೊತ್ತಂಬರಿ ಬೀಜಗಳ ಫೇಸ್ ಸ್ಕ್ರಬ್ ತಯಾರಿಸಿ. 1 ಚಮಚ ಕೊತ್ತಂಬರಿ ಬೀಜದ ಪುಡಿ, ½ ಚಮಚ ನಿಂಬೆ ರಸ, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 2 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಬಳಿಕ ಮುಖವನ್ನು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ ನೋಡಿ.
ಕೊತ್ತಂಬರಿ ಬೀಜದ ಪುಡಿ ಇವೆರಡನ್ನು ಮಿಕ್ಸ್ ಮಾಡಿ. ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ. ಅಲರ್ಜಿ ಸಮಸ್ಯೆ ಇರುವವರು, ಸೂಕ್ಷ್ಮ ಚರ್ಮದವರು ಬಳಸುವ ಮೊದಲು ಒಮ್ಮೆ ನಿಮ್ಮ ಕೈಯ ಮೇಲೆ ಸ್ವಲ್ಪ ಈ ಮಿಶ್ರಣವನ್ನು ಹಚ್ಚಿ ಪರೀಕ್ಷಿಸಿ ನಂತರ ಉಪಯೋಗಿಸಿ.