ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ. ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ.
ಬಹುತೇಕ ಜೀರಿಗೆಯನ್ನು ಹೋಲುವ ಸೋಂಪಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳಿವೆ. ಇದರಿಂದ ತ್ವಚೆಯ ಸೌಂದರ್ಯ ವೃದ್ಧಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಸೋಂಪು ಕಾಳನ್ನು ನಯವಾಗಿ ಪುಡಿ ಮಾಡಿ ಸ್ವಲ್ಪ ತಣ್ಣೀರು ಸೇರಿಸಿ ಮುಖ ತೊಳೆಯುವುದರಿಂದ ಕಣ್ಣಿನ ಕೆಳಭಾಗದಲ್ಲಿ ಊದಿಕೊಂಡಿದ್ದರೆ ಅದು ಸರಿಯಾಗುತ್ತದೆ.
ಹದಿಹರೆಯದಲ್ಲಿ ಮೂಡುವ ಮೊಡವೆಗಳಿಗೆ ಇದು ರಾಮಬಾಣ. ಇದನ್ನು ಪುಡಿ ಮಾಡಿ ಮೊಸರು ಹಾಗೂ ಜೇನುತುಪ್ಪ ಬೆರೆಸಿ ಹಚ್ಚಿ. ಒಣಗಿದ ಬಳಿಕ ತೊಳೆಯುವುದರಿಂದ ತ್ವಚೆ ತಂಪಾಗುತ್ತದೆ ಹಾಗು ಕ್ರಮೇಣ ಮೊಡವೆಗಳು ಮಾಯವಾಗುತ್ತವೆ.
ಒರಟಾದ ತ್ವಚೆಯನ್ನು ಮೃದುವಾಗಿಸುವ ಗುಣ ಇದಕ್ಕಿದೆ. ಸತ್ತ ಜೀವಕೋಶಗಳನ್ನು ತೊಲಗಿಸುತ್ತದೆ. ಸೋಂಪನ್ನು ನೀರಿನಲ್ಲಿ ಬೆರೆಸಿ ರುಬ್ಬಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ತೊಳೆದರೆ ಮುಖ ಹೊಳಪು ಪಡೆಯುತ್ತದೆ.