ಗ್ಲಿಸರಿನ್ ಸೌಂದರ್ಯ ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಬ್ಯೂಟಿ ಉತ್ಪನ್ನಗಳಾದ ಫೇಸ್ ವಾಷ್, ಸೋಪ್, ಫೇಸ್ ಕ್ರೀಂಗಳಲ್ಲಿ ಗ್ಲಿಸರಿನ್ ಅನ್ನು ಉಪಯೋಗಿಸುವುದೇ ಇದಕ್ಕೆ ಸಾಕ್ಷಿ. ಇದರ ಉಪಯೋಗಗಳನ್ನು ತಿಳಿಯೋಣ.
ಕೈ ಕಾಲು ಹಾಗೂ ಪಾದಗಳು ತುಂಬಾ ಒರಟಾಗಿದ್ದರೆ, ಒಂದು ಹನಿ ಗ್ಲಿಸರಿನ್ ಅನ್ನು ನೀವು ಉಪಯೋಗಿಸುವ ಬಾಡಿ ಲೋಷನ್ ಗೆ ಹಾಕಿಕೊಂಡು ಕೈ-ಕಾಲುಗಳಿಗೆ ಹಾಗೂ ಪಾದಕ್ಕೆ ಹಚ್ಚುವುದರಿಂದ ಒರಟು ಪಾದದ ಸಮಸ್ಯೆಗಳು ಹಾಗೂ ಸನ್ ಟ್ಯಾನ್ ಸಮಸ್ಯೆಗಳು ನಿವಾರಣೆ ಆಗುತ್ತದೆ.
ತುಟಿ ಒಡೆಯುತ್ತಿದ್ದರೆ ಅಥವಾ ಒಣಗಿದ ಹಾಗೆ ಅನಿಸಿದರೆ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಹನಿ ಗ್ಲಿಸರಿನ್ ಅನ್ನು ತುಟಿಗೆ ಹಚ್ಚಿಕೊಂಡು ಬೆಳಗ್ಗೆ ತೊಳೆದುಕೊಳ್ಳಿ. ಇದರಿಂದ ಒಣ ತುಟಿಯ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ತುಟಿಗಳು ಗುಲಾಬಿ ಬಣ್ಣ ಪಡೆದುಕೊಳ್ಳುತ್ತವೆ.
ಕೈ ಮತ್ತು ಕಾಲುಗಳು ತುಂಬಾನೇ ಕಪ್ಪಾಗಿದ್ದರೆ ಒಂದು ಚಮಚ ಗ್ಲಿಸರಿನ್ ಗೆ ಒಂದು ಚಮಚ ನಿಂಬೆರಸ, ಒಂದು ಚಮಚ ಸಕ್ಕರೆ ಹಾಕಿ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಸಕ್ಕರೆ ಕರಗುವವರೆಗೆ ಸ್ಕ್ರಬ್ ಮಾಡಿ. ಇದನ್ನು ಕೈ ಮತ್ತು ಕಾಲುಗಳಿಗೆ ಹಚ್ಚುತ್ತಾ ಬಂದರೆ ಕಪ್ಪಗಾದ ಕೈಕಾಲುಗಳು ಬೆಳ್ಳಗಾಗುತ್ತವೆ.