ಅಮೆರಿಕಕ್ಕೆ ತೆರಳಲಿರುವ ಭಾರತೀಯ ವೃತ್ತಿಪರರಿಗೆ ಒಳ್ಳೆ ಸುದ್ದಿ ಇದೆ. ಎಚ್ -1 ಬಿ ವೀಸಾಗಳಿಗೆ ಅರ್ಜಿ ಸಲ್ಲಿಸಿರುವ ಕೆಲವರನ್ನು ಆಯ್ಕೆ ಮಾಡಲು, ಯುಎಸ್ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಅಮೆರಿಕ ಎರಡನೇ ಬಾರಿಗೆ ಲಾಟರಿ ಪ್ರಕ್ರಿಯೆಯನ್ನು ಆಯೋಜಿಸಿದೆ.
ಯುಎಸ್‌ಸಿಐಎಸ್ ಈ ಬಗ್ಗೆ ಘೋಷಿಣೆ ಮಾಡಿದೆ. ಮೊದಲ ಲಾಟರಿಯಲ್ಲಿ ಈ ವೀಸಾ ಪಡೆಯಲು ಸಾಧ್ಯವಾಗದ ನೂರಾರು ಭಾರತೀಯ ಐಟಿ ವೃತ್ತಿಪರರಿಗೆ ಇದು ಮತ್ತೊಂದು ಅವಕಾಶ ಸಿಗಲಿದೆ. ಈ ವಲಸೆ ರಹಿತ ವೀಸಾಗೆ ಭಾರತದ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ. ಯುಎಸ್ ಕಂಪನಿಗಳು ಈ ವೀಸಾ ಮೂಲಕ, ವಿಶೇಷ ತಾಂತ್ರಿಕ ಪರಿಣತಿ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ.
2022 ರ ಆರ್ಥಿಕ ವರ್ಷಕ್ಕೆ ಇನ್ನೂ ಕೆಲವರಿಗೆ ಅನುಮತಿ ನೀಡಬಹುದು. ಈ ಮೊದಲೇ ಅರ್ಜಿ ಸಲ್ಲಿಸಿದ್ದ ಕೆಲವರನ್ನು ಜುಲೈ 28ರಂದು ಆಯ್ಕೆ ಮಾಡಲಾಗಿದೆ. ಆಗಸ್ಟ್ 2 ರಿಂದ ನವೆಂಬರ್ 3 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ MyUSCIS ಖಾತೆಗಳನ್ನು ನವೀಕರಿಸುತ್ತೇವೆ. ಇತರ ಮಾಹಿತಿಯನ್ನು ಸಹ ಅದರಲ್ಲಿ ಸೇರಿಸಲಾಗುವುದು ಎಂದು ಯುಎಸ್ಸಿಐಎಸ್ ಹೇಳಿದೆ.
ಎಚ್-1ಬಿ ಕ್ಯಾಪ್-ಸಬ್ಜೆಕ್ಟ್ ಅರ್ಜಿಗಳನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಸರಿಯಾದ ಸಮಯದೊಳಗೆ ಸಲ್ಲಿಸಬೇಕು. ಎಚ್‌ಸಿ 1 ಅರ್ಜಿಗೆ ಆನ್‌ಲೈನ್ ಫೈಲಿಂಗ್ ಲಭ್ಯವಿಲ್ಲ ಎಂದು ಯುಎಸ್‌ಸಿಐಎಸ್ ತಿಳಿಸಿದೆ. ಅರ್ಜಿದಾರರು ಅರ್ಜಿಯೊಂದಿಗೆ ನೋಂದಣಿ ಆಯ್ಕೆ ಸೂಚನೆಯ ಮುದ್ರಿತ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ.