ವಿಕ್ಕಿ ಡೋನರ್ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡಿರ್ತಿರಿ. ಅದ್ರಲ್ಲಿ ವೀರ್ಯ ದಾನ ಮಾಡುವ ವ್ಯಕ್ತಿ ಅನೇಕ ಕುಟುಂಬಗಳ ಸಂತೋಷಕ್ಕೆ ಕಾರಣವಾಗಿದ್ದ. ಆದ್ರೆ ಅಮೆರಿಕಾದಲ್ಲಿ ವೈದ್ಯನೊಬ್ಬ ತಾನೇ ವೀರ್ಯ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. 40 ವರ್ಷಗಳ ನಂತ್ರ ಆತನ ಮೋಸ ಗೊತ್ತಾಗಿದೆ.
ಕೆನಡಾದ ರಾಬರ್ಟ್ ಎಂಬ ಮಹಿಳೆ ತನ್ನ ತಾಯಿ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಳು. ರಾಬರ್ಟ್ ತಾಯಿ ಈಗ ವೃದ್ಧೆ. 1983ರಲ್ಲಿ ಆಕೆಗೆ ಡಾಕ್ಟರ್ ಮಾರ್ಟಿನ್ ಗ್ರೀನ್ ಬರ್ಗ್ ವೀರ್ಯ ದಾನ ಮಾಡಿದ್ದಾನೆ ಎಂದು ರಾಬರ್ಟ್ ಆರೋಪ ಮಾಡಿದ್ದಳು. ಕೋರ್ಟ್ ನಲ್ಲಿ ರಾಬರ್ಟ್ ತಾಯಿ ನೀಡಿದ ಹೇಳಿಕೆ ಎಲ್ಲರನ್ನು ದಂಗಾಗಿಸಿತ್ತು.
ರಾಬರ್ಟ್ ತಾಯಿ ಬಿಯಾಂಕಾ ವೋಸ್ ಗೆ ಮಕ್ಕಳಾಗಿರಲಿಲ್ಲ. ಆಗ ಆಕೆ ಮಾರ್ಟಿನ್ ಭೇಟಿಯಾಗಿದ್ದಳು. ವೀರ್ಯ ದಾನಿಯನ್ನು ಹುಡುಕಿಕೊಡುವಂತೆ ಕೇಳಿದ್ದಳು. ಆದ್ರೆ ಮಾರ್ಟಿನ್, ವೀರ್ಯ ದಾನಿ ಹುಡುಕುವ ಬದಲು ತಾನೇ ವೀರ್ಯ ದಾನ ಮಾಡಿದ್ದ. ಈ ವಿಷ್ಯ ರಾಬರ್ಟ್ ಡಿಎನ್ಎ ವರದಿಯಲ್ಲಿತ್ತು. ಅದರಲ್ಲಿ ರಾಬರ್ಟ್ ತಂದೆ ಮಾರ್ಟಿನ್ ಎಂದಿತ್ತು. ಮಾರ್ಟಿನ್ ವೀರ್ಯಕ್ಕಾಗಿ 7325 ರೂಪಾಯಿ ಪಡೆದಿದ್ದನಂತೆ.
ವೈದ್ಯರು ವೀರ್ಯ ದಾನ ಮಾಡುವಂತಿಲ್ಲ ಎಂಬ ನಿಯಮದ ಮೇಲೆ ಆತನ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲಾಗಿದೆ. ವೈದ್ಯ 50-100 ಮಂದಿಗೆ ವೀರ್ಯ ದಾನಮಾಡಿದ್ದ.