ಭಾರತದಲ್ಲಿ ಟಾಯ್ಲೆಟ್ ಪೇಪರ್ ಬಳಕೆ ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಗೆ ಬಂದಿದ್ದರೂ ಅದನ್ನು ಬಳಸುವವರ ಸಂಖ್ಯೆ ಸಾಕಷ್ಟಿದೆ. ವಿಶ್ವದಾದ್ಯಂತ ಟಾಯ್ಲೆಟ್ ಪೇಪರ್ ಗೆ ಬೇಡಿಕೆ ಇದೆ. ಟಾಯ್ಲೆಟ್ ಪೇಪರನ್ನು ಸೆಲ್ಯುಲೋಸ್ ಫೈಬರ್ ನಿಂದ ತಯಾರಿಸುತ್ತಾರೆ. ಟಾಯ್ಲೆಟ್ ಪೇಪರ್ ಪರಿಸರ ಸ್ನೇಹಿಯಾಗಿದೆ. ಇದು ಬೇಗ ಕೊಳೆಯುವ ಕಾರಣ ಇದನ್ನು ಬಳಸಲು ಯಾವುದೇ ಅಡ್ಡಿಯಿಲ್ಲ. ಹಾಗಾಗಿಯೇ ದಿನದಿಂದ ದಿನಕ್ಕೆ ಟಾಯ್ಲೆಟ್ ಪೇಪರ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.
ಇನ್ನು ವಿಷ್ಯಕ್ಕೆ ಬರೋದಾದ್ರೆ, ವಿಶ್ವದಲ್ಲಿ ಅತಿ ಹೆಚ್ಚು ಟಾಯ್ಲೆಟ್ ಪೇಪರ್ ಬಳಸುವ ದೇಶ ಉತ್ತರ ಅಮೆರಿಕ. ಈ ದೇಶದ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ 141 ರೋಲ್ ಟಾಯ್ಲೆಟ್ ಪೇಪರ್ ಬಳಸ್ತಾನೆ ಎಂದು ವರದಿಯೊಂದು ಹೇಳಿದೆ. ಸ್ಟ್ಯಾಟಿಸ್ಟಾ ಕನ್ಸ್ಯೂಮರ್ ಮಾರ್ಕೆಟ್ ಔಟ್‌ಲುಕ್ ಈ ವರದಿ ನೀಡಿದೆ. ಅದ್ರ ಪ್ರಕಾರ, ಉತ್ತರ ಅಮೆರಿಕಾ ನಂತ್ರ ಜರ್ಮನಿ ಎರಡನೇ ಸ್ಥಾನದಲ್ಲಿದೆ. ಜರ್ಮನಿ ಜನರು ವಾರ್ಷಿಕವಾಗಿ 134 ರೋಲ್ ಟಾಯ್ಲೆಟ್ ಪೇಪರ್ ಬಳಸ್ತಾರೆ.
ಇನ್ನು ಯುಕೆ ಮೂರನೇ ಸ್ಥಾನದಲ್ಲಿದ್ದು, ಇಲ್ಲಿ ವ್ಯಕ್ತಿ ಪ್ರತಿ ವರ್ಷ 127 ರೋಲ್ ಟಾಯ್ಲೆಟ್ ಪೇಪರ್ ಬಳಸ್ತಾನೆ. ಜಪಾನ್ ಇದ್ರ ನಂತ್ರದ ಸ್ಥಾನದಲ್ಲಿದ್ದು, ಅಲ್ಲಿ ವಾರ್ಷಿಕ ರೋಲ್ ಟಾಯ್ಲೆಟ್ ಪೇಪರ್ ಬಳಕೆ 91. ಆಸ್ಟ್ರೇಲಿಯಾ, ಸ್ಪೇನ್, ಫ್ರಾನ್ಸ್, ಇಟಲಿ, ಚೀನಾಗಳು ಅತಿ ಹೆಚ್ಚು ಟಾಯ್ಲೆಟ್ ಪೇಪರ್ ಬಳಸುವ ಹತ್ತು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಈ ಹಿಂದೆ ಬಣ್ಣ ಬಣ್ಣದಲ್ಲಿ ಟಾಯ್ಲೆಟ್ ಪೇಪರ್ ಬಳಸಲಾಗ್ತಿತ್ತು. ಆದ್ರೆ ಬಿಳಿ ಬಣ್ಣದ ಟಾಯ್ಲೆಟ್ ಪೇಪರ್ ಆರೋಗ್ಯಕ್ಕೆ ಒಳ್ಳೆಯದು ಎಂಬ ವರದಿ ಬಂದ್ಮೇಲೆ ಅದರ ಬಳಕೆ ಹೆಚ್ಚಾಗಿದೆ.