ಫ್ಲೋರಿಡಾ: ಫ್ಲೋರಿಡಾದ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣ, ಮೂರುವರೆ ನಿಮಿಷಕ್ಕೆ ಸಿದ್ಧವಾಗುತ್ತದೆ ಎನ್ನುವ ಕಾರಣಕ್ಕೆ ಚೀಸ್ ಕಪ್‌ಗಳನ್ನು ತೆಗೆದುಕೊಂಡರೆ ಅದು ಅದಕ್ಕಿಂತಲೂ ಹೆಚ್ಚಿನ ಅವಧಿ ತೆಗೆದುಕೊಂಡಿದೆ ಎಂದು!
ವೆಲ್ವೀಟಾದ ಮೈಕ್ರೊವೇವ್ ಮೂಲಕ ಮಾಡಬಹುದಾದ ಚೀಸ್ ಕಪ್‌ಗಳು 3.5 ನಿಮಿಷಗಳಲ್ಲಿ ಸಿದ್ಧವಾಗುತ್ತವೆ ಎಂದು ಸುಳ್ಳು ಜಾಹೀರಾತು ನೀಡಲಾಗಿದೆ. ತಾವು ಇದನ್ನು ನಂಬಿ ಖರೀದಿ ಮಾಡಿದರೆ ಅದಕ್ಕಿಂತಲೂ ಹೆಚ್ಚಿನ ಅವಧಿ ತೆಗೆದುಕೊಂಡಿದೆ ಎಂದು ಹಿಯಾಲಿಯ ಅಮಂಡಾ ರಮಿರೆಜ್ ಎಂಬಾಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ವೆಲ್ವೀಟಾದ ಮೂಲ ಸಂಸ್ಥೆಯಾದ ಕ್ರಾಫ್ಟ್ ಹೈಂಜ್ ಫುಡ್ಸ್ ಕಂಪೆನಿಯ ವಿರುದ್ಧ ಈಕೆ ಮೊಕದ್ದಮೆ ಹೂಡಿದ್ದಾಳೆ. ಅವಳು $5 ಮಿಲಿಯನ್ ಪರಿಹಾರ ನೀಡುವಂತೆ ಕೋರಿದ್ದಾಳೆ!
ನವೆಂಬರ್ 18 ರಂದು ಫ್ಲೋರಿಡಾದ ಮಿಯಾಮಿ ವಿಭಾಗದ ಜಿಲ್ಲಾ ನ್ಯಾಯಾಲಯದಲ್ಲಿ ರಾಮಿರೆಜ್ ದಾವೆ ಹೂಡಿದ್ದಾಳೆ. ಕಂಪೆನಿಯು ಸುಳ್ಳು ಜಾಹೀರಾತಿನಲ್ಲಿ ತೊಡಗಿಸಿಕೊಂಡಿದೆ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಪ್ರಚಾರ ಮಾಡುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಕೋರ್ಟ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು.