ಪ್ರೌಢಶಾಲೆ ಹಂತದಲ್ಲಿ ಕಳೆದುಕೊಂಡ ಉಂಗುರ 53 ವರ್ಷದ ಬಳಿಕ ಪತ್ತೆಯಾದ ಪ್ರಸಂಗ ನಡೆದಿದೆ.
ಡಾನಾ ಸ್ಕಾಟ್ ಲಾಫ್ಲಿನ್ ಎಂಬಾಕೆ 1969 ರಲ್ಲಿ ತನ್ನ ಪ್ರೌಢಶಾಲಾ ಓದುತ್ತಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಫಿಶಿಂಗ್ ಮಾಡುತ್ತಾ ಈಜುತ್ತಿದ್ದಾಗ ಉಂಗುರ ಕಳೆದುಕೊಂಡಿದ್ದಳು.
ಉಂಗುರವು ಅವಳ ಬೆರಳಿನಿಂದ ಬಿದ್ದು ತಳಕ್ಕೆ ಮುಳುಗಿತ್ತು. ಉಂಗುರವು ಶಾಶ್ವತವಾಗಿ ಹೋಗಿದೆ ಎಂದು ಲಾಫ್ಲಿನ್ ಭಾವಿಸಿದ್ದರೂ, ಈ ತಿಂಗಳ ಆರಂಭದಲ್ಲಿ ಅದು ಮ್ಯಾಜಿಕ್ ಎಂಬಂತೆ ಆಕೆಯ ಕೈ ಸೇರಿದೆ.
ಬೆರಿರ್ಸ್ಸಾ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಉಂಗುರ ಕಂಡುಬಂದಿದೆ ಮತ್ತು ಅದರ ಮಾಲೀಕರನ್ನು ಗುರುತಿಸಲು ಪ್ರಯತ್ನಿಸಿದ್ದು, ದಂಪತಿಯಿಂದ ಆಕೆಯ ಮಗನಿಗೆ ಆಶ್ಚರ್ಯಕರ ಸಂದೇಶ ಬಂದಿದೆ. ಅವರು ಉಂಗುರದ ದೃಢೀಕರಣಕ್ಕಾಗಿ ಫೋಟೋ ಕಳುಹಿಸಿದ್ದರು.
BIG NEWS: ತೀವ್ರ ಕುತೂಹಲಕ್ಕೆ ಕಾರಣವಾಯ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆಗಿನ ಕಿಚ್ಚ ಸುದೀಪ್ ಭೇಟಿ
ಈಗ ಅಲಬಾಮಾದಲ್ಲಿ ವಾಸಿಸುತ್ತಿರುವ ಲಾಫ್ಲಿನ್ ಅವರು ಉಂಗುರದ ಚಿತ್ರಗಳನ್ನು ಪರಿಶೀಲಿಸಿ, ಅದರಲ್ಲಿ ತನ್ನ ಮೊದಲ ಅಕ್ಷರ, ಅವಳು ಓದಿದ ಶಾಲೆಯ ಹೆಸರಿನ ದಾಖಲೆ ಇರುವುದನ್ನು ಖಚಿತಪಡಿಸಿದ ಬಳಿಕ ದಂಪತಿಯು ಕೊರಿಯರ್ ಮೂಲಕ ಆಕೆಗೆ ಉಂಗುರ ಕಳುಹಿಸಿದ್ದಾರೆ. ಮೊದಲು ನಂಬಲಾಗಲಿಲ್ಲ. ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಆಸ್ಟ್ರೇಲಿಯಾದ ಇದೇ ರೀತಿಯ ಘಟನೆಯಲ್ಲಿ, ಈಜುಗಾರನು ಸಮುದ್ರತಳದಲ್ಲಿ ಮೆಮೊರಿ ಕಾರ್ಡ್ ಕಂಡುಕೊಂಡಿದ್ದರು. ಅದರಲ್ಲಿ ನೂರಾರು ಫೋಟೋಗಳಿದ್ದು, ಏಳು ವರ್ಷದ ಬಳಿಕ ಕುಟುಂಬಕ್ಕೆ ಅದು ತಲುಪಿತ್ತು.