ಇದೊಂದು ಬಲು ಅಪರೂಪದ ಮತ್ತು ರೋಚಕ ಪ್ರಸಂಗ. ಅನ್ನಾ ಪ್ರಿಲ್ಲಾಮನ್ ಎಂಬ ಅಮೆರಿಕನ್ ಮಹಿಳೆ ವರ್ಜೀನಿಯಾದಲ್ಲಿ ಮನೆ ಖರೀದಿಸಿದರು. ಆದರೆ ಆ ಮನೆಯೊಳಗಿನ ರಹಸ್ಯವು ಆಕೆಯನ್ನು ದಂಗುಬಡಿಸಿದೆ. ಅಷ್ಟೇ ಅಲ್ಲದೇ ಆಕೆಯ ಹೃದಯ ಬೆಚ್ಚಗಾಗಿಸಿದೆ.
ಮನೆಯಲ್ಲೊಂದು ರಹಸ್ಯ ಸ್ಥಳದಂತೆ ಕಾಣುವ ಕೊಠಡಿ ಇದ್ದು, ಅದನ್ನು ಸ್ವಚ್ಛಗೊಳಿಸುವಾಗ ಎರಡು ಪೆಟ್ಟಿಗೆ ಕಾಣಿಸಿದೆ. ಪೆಟ್ಟಿಗೆ ತುಂಬ ಕೈಬರಹದ ಪತ್ರಗಳಿದ್ದವು. ಬೆಟ್ ಸ್ಯೂ ಎಂಬ ಯುವತಿಗೆ ವ್ಯಾನ್ಸ್ ಎಂಬ ಹೆಸರಿನಿಂದ ಬರೆಯಲಾದ ಪತ್ರಗಳಾಗಿದ್ದವು.
ಈ ಆಪ್ಟಿಕಲ್ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವ ಸಂಖ್ಯೆಗಳನ್ನು ಹೇಳಬಲ್ಲಿರಾ….?
ಆ ಇಬ್ಬರೂ ಜಾನ್ ಮಾರ್ಷಲ್ ಪ್ರೌಢಶಾಲೆಯಲ್ಲಿ ಒಟ್ಟಿಗೆ ಓದಿದ್ದು ಆಕೆ ಗಮನಕ್ಕೆ ಬಂದಿದೆ. ಕರ್ಸಿವ್ನಲ್ಲಿ ಬರೆದ ಪತ್ರಗಳು ಸುಮಾರು 70 ವರ್ಷ ಹಳೆಯವು ಮತ್ತು ಸ್ಪಷ್ಟವಾಗಿ, ಲವ್ ಸ್ಟೋರಿಯ ಭಾಗವಾಗಿದೆ ಎಂದು ಅನ್ನಾಗೆ ಮನವರಿಕೆಯಾಗಿದೆ.
ಮೊದಲಿಗೆ, ಪತ್ರ ಓದುವುದು ವ್ಯಾನ್ಸ್ ಮತ್ತು ಬೆಟ್ಟಿಯ ಖಾಸಗಿತನಕ್ಕೆ ಧಕ್ಕೆ ಎಂದು ಆಕೆ ಭಾವಿಸಿದಳು, ಆದರೆ ಅದನ್ನು ಎಸೆಯಲು ಮನಸ್ಸು ಒಪ್ಪಲಿಲ್ಲವಂತೆ. ಇದೀಗ ಜಾಲತಾಣದ ಮೂಲಕ ಸಂಬಂಧಿಗಳ ಹುಡುಕಾಟದಲ್ಲಿದ್ದಾರೆ.