ಮಗಳಿಗೆಂದು ಮ್ಯಾಕ್‌ಡೊನಾಲ್ಡ್ಸ್‌ನಿಂದ ಆರ್ಡರ್ ಮಾಡಿದ್ದ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್ ಕಟ್ಟರ್ ಒಂದನ್ನು ಕಂಡು ಚಕಿತರಾದ ಮಹಿಳೆಯೊಬ್ಬರು ಈ ವಿಚಾರವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಡಾನ್ ಪರೆಟ್ ಹೆಸರಿನ ಈ ಮಹಿಳೆ ತನ್ನ ಮಗಳ ’ಹ್ಯಾಪಿ ಮೀಲ್’ ಬಾಕ್ಸ್‌ನ ಎರಡು ಚಿತ್ರಗಳನ್ನು ಶೇರ್ ಮಾಡಿದ್ದು, “ನೀವು ಇಂಥ ವಿಚಾರಗಳ ಬಗ್ಗೆ ಕೇಳಿರಬಹುದು. ಆದರೆ ನನಗೆ ಈ ಅನುಭವ ಆಗಬಹುದು ಎಂದು ಊಹಿಸಿರಲಿಲ್ಲ. ಒಂದು ವೇಳೆ ನನ್ನ ಮಗಳು ಹಾಗೂ ಆಕೆ ಈ ಆಹಾರವನ್ನು ಹಂಚಿಕೊಂಡು ತನ್ನಲಿದ್ದ ಮಕ್ಕಳಿಗೆ ಈ ಬಾಕ್ಸ್ ಕಟರ್ ಸಿಕ್ಕಿ, ಅವರೆಲ್ಲಾ ಅದನ್ನು ಆಟಿಕೆ ಎಂದುಕೊಂಡು ಆಟವಾಡಲು ಹೋಗಿದ್ದರೆ ಏನು ಕಥೆ,” ಎಂದು ಕಳಕಳಿ ವ್ಯಕ್ತಪಡಿಸಿ ಡಾನ್ ಬರೆದುಕೊಂಡಿದ್ದಾರೆ.
ಅದು ಹೇಗೆ ಈ ಬಾಕ್ಸ್ ಕಟರ್ ತಮ್ಮ ಮಗಳ ಹ್ಯಾಪಿ ಮೀಲ್ ಬಾಕ್ಸಿನಲ್ಲಿ ಬಂತು ಎಂದು ಮ್ಯಾಕ್ ಡೊನಾಲ್ಡ್ಸ್‌ಅನ್ನು ಟ್ಯಾಗ್ ಮಾಡಿ ಕೇಳಿದ್ದಾರೆ ಡಾನ್.
ಈ ಕುರಿತು ಪ್ರತಿಕ್ರಿಯಿಸಿದ ಮ್ಯಾಕ್ ಡೊನಾಲ್ಡ್ಸ್ ವಕ್ತಾರ, “ಈ ಘಟನೆಗೆ ಸಂಬಂಧಪಟ್ಟ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದು, ತನಿಖೆ ಮುಂದುವರೆಸಿದ್ದೇವೆ,” ಎಂದಿದ್ದಾರೆ.