
ಎರಡು ಮಕ್ಕಳನ್ನು ಸಂಭಾಳಿಸೋದೇ ಈಗ ಕಷ್ಟ. ಅಂತದ್ರಲ್ಲಿ 10 -11 ಮಕ್ಕಳಾದ್ರೆ ಕಥೆ ಮುಗೀತು. ಆದ್ರೆ ಅಮೆರಿಕಾದ ವೆರೋನಿಕಾ ಮೆರಿಟ್ 11 ಮಕ್ಕಳನ್ನು ಪಡೆದಿದ್ದಾಳೆ. 14 ನೇ ವಯಸ್ಸಿನಲ್ಲಿ ತಾಯಿಯಾದ ವೆರೋನಿಕಾಗೆ ಇಂದು 11 ಮಕ್ಕಳಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ವೆರೋನಿಕಾ ಇನ್ನೂ 6 ಮಕ್ಕಳು ಬೇಕಂತೆ. 36 ವರ್ಷದ ಮಹಿಳೆ ಇನ್ನೂ 6 ಮಕ್ಕಳನ್ನು ಪಡೆದ ನಂತರ ಕುಟುಂಬ ಸಂಪೂರ್ಣವಾಗುತ್ತದೆ ಎನ್ನುತ್ತಾಳೆ.
ವರದಿಯ ಪ್ರಕಾರ, ನ್ಯೂಯಾರ್ಕ್ ನಿವಾಸಿ ವೆರೋನಿಕಾ ಮೆರಿಟ್, 14 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಳು. ಆಕೆಗೆ ಈಗ 21 ವರ್ಷದ ಮಗಳಿದ್ದಾಳೆ. ಇನ್ನೂ ಆರು ಮಕ್ಕಳು ನನಗೆ ಬೇಕೆಂದು ವೆರೋನಿಕಾ ಹೇಳಿದ್ದಾಳೆ. ಎಲ್ಲ ಮಕ್ಕಳಿಗೂ ತಂದೆ ಒಬ್ಬರಾ ಎಂಬ ಪ್ರಶ್ನೆಗಳನ್ನು ಜನರು ಕೇಳಲು ಶುರು ಮಾಡಿದ್ದಾರೆ. ವೃತ್ತಿಯಲ್ಲಿ ಕಲಾವಿದೆಯಾಗಿರುವ ವೆರೋನಿಕಾ, 9 ಕೋಣೆಯಿರುವ ಮನೆಯಲ್ಲಿ ವಾಸವಾಗಿದ್ದಾಳೆ.
ಕಳೆದ ವರ್ಷ ಜುಲೈನಲ್ಲಿ ಆಕೆ ಗಂಡ ಹಳೆ ಮನೆ ಖರೀದಿ ಮಾಡಿದ್ದ. ಅದನ್ನೇ ಈಗ ಸರಿ ಮಾಡಲಾಗಿದೆಯಂತೆ. ಆದ್ರೆ ಗಂಡ ಬೇಸ್ಮೆಂಟ್ ನಲ್ಲಿ ಮಲಗ್ತಾರೆಂದು ವೆರೋನಿಕಾ ಹೇಳಿದ್ದಾರೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ವೆರೋನಿಕ ಗರ್ಭಿಣಿಯಾಗಿದ್ದಳು. ನಂತ್ರ ಪ್ರೇಮಿಯನ್ನು ಮದುವೆಯಾಗಿದ್ದಳು. ಆ ಪ್ರೇಮಿಯಿಂದ ವೆರೋನಿಕಾ ಇಬ್ಬರು ಮಕ್ಕಳನ್ನು ಪಡೆದಿದ್ದಾಳೆ. ಕೆಲ ಸಮಯದ ನಂತ್ರ ಆತನಿಂದ ವಿಚ್ಛೇದನ ಪಡೆದಳು. ಇಲ್ಲಿಯವರೆಗೆ ಗರ್ಭ ನಿರೋಧಕ ಮಾತ್ರೆಯನ್ನು ಆಕೆ ಸೇವಿಸಿಲ್ಲವಂತೆ. ದೊಡ್ಡ ಕುಟುಂಬ ನಿರ್ವಹಣೆ ಸುಲಭವಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ತುಂಬಾ ಕಷ್ಟಪಡಬೇಕೆಂದು ಆಕೆ ಹೇಳಿದ್ದಾಳೆ.