ಅಮೆರಿಕದಲ್ಲಿ ಕೊರೊನಾ ವೈರಸ್ ಡೆಲ್ಟಾ ರೂಪಾಂತರಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವನ್ನ ಮುಂದುವರಿಸಲಿದೆ ಎಂದು ಶ್ವೇತಭವನ ಅಧಿಕೃತ ಮಾಹಿತಿ ನೀಡಿದೆ.
ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಕೊರೊನಾ ಲಸಿಕೆ ಸ್ವೀಕರಿಸದವರಲ್ಲಿ ಡೆಲ್ಟಾ ರೂಪಾಂತರಿ ಕಾಣಿಸಿಕೊಳ್ತಿರುವ ಹಿನ್ನೆಯಲ್ಲಿಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರಯಾಣ ನಿರ್ಬಂಧವನ್ನ ಸರ್ಕಾರವು ಮುಂದುವರಿಸಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ರು.
ಕಳೆದ 14 ದಿನಗಳಲ್ಲಿ ಬ್ರಿಟನ್, ಯುರೋಪಿಯನ್ ಷೆಂಗೆನ್ ಪ್ರದೇಶ, ಐರ್ಲೆಂಡ್, ಚೀನಾ, ಇರಾನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ಭಾರತದಲ್ಲಿ ಇದ್ದವರಿಗೆ ಅಮೆರಿಕ ಪ್ರಸ್ತುತ ದೇಶಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ.
ಇದು ಮಾತ್ರವಲ್ಲದೇ ಗಡಿಯಲ್ಲಿ ಕೆನಡಾ ಹಾಗೂ ಮೆಕ್ಸಿಕೋ ಅನಿವಾರ್ಯವಲ್ಲದ ಪ್ರಯಾಣ ನಿರ್ಬಂಧವನ್ನು ಮುಂದುವರಿಸಿದೆ.