ಬಾಲಕನೊಬ್ಬ ನಿರಾಶ್ರಿತರಿಗೆ ಆಹಾರ ವಿತರಿಸಲು ತನ್ನ ಅನುದಾನವನ್ನು ಬಳಸಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಅಮೆರಿಕಾದ ಮಿಸ್ಸಿಸ್ಸಿಪ್ಪಿಯ 13 ವರ್ಷದ ಬಾಲಕ ತನ್ನ ಮೇಕ್-ಎ-ವಿಶ್ ಅನುದಾನವನ್ನು ಒಂದು ವರ್ಷದವರೆಗೆ ನಿರಾಶ್ರಿತರಿಗಾಗಿ ಬಳಸುತ್ತಿದ್ದಾನೆ.
ಅನೇಕ ಮಕ್ಕಳು ತಮ್ಮ ಅನುದಾನವನ್ನು ಬೇರೆ ಯಾವುದಕ್ಕಾದರೂ ಖರ್ಚು ಮಾಡಿದ್ರೆ, ಅಬ್ರಹಾಂ ಓಲಗ್ಬೆಬಿ ನಿರ್ಗತಿಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾನೆ. ಅಬ್ರಹಾಂ 2020 ರಲ್ಲಿ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದ. ಈ ಮಾರಣಾಂತಿಕ ಕಾಯಿಲೆಯಿಂದ ಗುಣಮುಖನಾಗಲು ಮೂಳೆ ಮಜ್ಜೆಯ ಕಸಿ ಮಾಡಬೇಕಾಗಿತ್ತು.
ಅದೃಷ್ಟವಶಾತ್, ಅಬ್ರಹಾಂ ಈ ವರ್ಷ ಯಶಸ್ವಿ ಕಸಿಗೆ ಒಳಗಾಗಿದ್ದಾನೆ. ಜಾಗತಿಕ ಸಂಸ್ಥೆ ಮೇಕ್-ಎ-ವಿಶ್ ಫೌಂಡೇಶನ್ ಮೂಲಕ ಶಸ್ತ್ರಚಿಕಿತ್ಸೆಗೆ ಅನುದಾನ ಪಡೆದಿದ್ದ. ಇನ್ನು ಅನುದಾನದಲ್ಲಿ ಉಳಿದಿದ್ದ ಹಣವನ್ನು ನಿರ್ಗತಿಕರ ಆಹಾರಕ್ಕಾಗಿ ದಾನ ಮಾಡಲು 13 ವರ್ಷದ ಬಾಲಕ ಅಬ್ರಾಹಂ ನಿರ್ಧರಿಸಿದ್ದಾನೆ. ಹೀಗಾಗಿ ಮನೆಯಿಲ್ಲದ ಜನರಿಗೆ ಮೇಕ್-ಎ-ವಿಶ್ ಮುಖಾಂತರ ಊಟವನ್ನು ವಿತರಿಸಲಾಯಿತು. ಒಂದು ವರ್ಷದವರೆಗೆ ತನ್ನ ಅನುದಾನದ ಹಣವನ್ನು ಈ ರೀತಿ ಸದುಪಯೋಗಪಡಿಸಿಕೊಳ್ಳಲು ಅಬ್ರಾಹಂ ನಿರ್ಧರಿಸಿದ್ದಾನೆ.
ಅಬ್ರಹಾಂನ ನಿರ್ಧಾರದಿಂದ ಕುಟುಂಬ ಬಹಳ ಸಂತೋಷಪಟ್ಟಿದೆ. ಸಂಸ್ಥೆಯ 35 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ದತ್ತಿ ಆಶಯವಾಗಿದೆ ಎಂದು ಮೇಕ್-ಎ-ವಿಶ್ ಮಿಸ್ಸಿಸ್ಸಿಪ್ಪಿಯ ಸಹಾಯಕರಾದ ಲಿಂಡಾ ಸೆರ್ಮನ್ಸ್ ಬಹಿರಂಗಪಡಿಸಿದ್ದಾರೆ.