ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ, ವರ್ಣಭೇದ ಸಂಘರ್ಷಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಕಪ್ಪು ವರ್ಣೀಯರನ್ನು ಕಂಡರೆ ಬಿಳಿ ಬಣ್ಣದ ಜನರಿಗೆ ಆಗಲ್ಲ. ಅದರಲ್ಲೂ ಯುವ ಜನಾಂಗದ ಮನಸ್ಸಲ್ಲಿ ಇಂಥ ತಾರತಮ್ಯ ನಿವಾರಣೆ ಆಗುವ ಬದಲು ಚಿಗುರೊಡೆಯುತ್ತಿರುವುದು ಆತಂಕಕಾರಿ ಸಂಗತಿ. ಇಂಥದ್ದೇ ವರ್ಣೀಯ ಘರ್ಷಣೆಯ ವಿಡಿಯೊವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಅಮೆರಿಕದ ಟೆಕ್ಸಾಸ್ನ ಕ್ಯಾಸಲ್ಬೆರ್ರಿ ಹೈಸ್ಕೂಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳು, ತನ್ನ ಶಿಕ್ಷಕಿ ಕಪ್ಪು ಬಣ್ಣದವಳು ಎಂದು ದೊಡ್ಡ ರಾದ್ಧಾಂತ ಎಬ್ಬಿಸಿದ್ದಾಳೆ. ಟೀಚರ್ ಡೆಸ್ಕ್ನತ್ತ ನುಗ್ಗುವ ವಿದ್ಯಾರ್ಥಿನಿಯು ಅಲ್ಲಿದ್ದ ಫೋನ್ ಎತ್ತಿಕೊಂಡು ಪೋಷಕರಿಗೆ ಕರೆ ಮಾಡಿ ಶಿಕ್ಷಕಿಯ ಬಗ್ಗೆ ಅವಾಚ್ಯವಾಗಿ ನಿಂದಿಸುತ್ತಾಳೆ.
BIG NEWS: 2 ಡೋಸ್ ಲಸಿಕೆ ಪಡೆದವರಿಗೆ ‘ಬೂಸ್ಟರ್’ನಿಂದ ರಕ್ಷಣೆ ಬಗ್ಗೆ ಪುರಾವೆ ಇಲ್ಲ
ಹಾಗಿದ್ದು ಕೂಡ ಶಿಕ್ಷಕಿಯು ಸಮಾಧಾನವಾಗಿ ಇದ್ದು, ಬೇಡ ನೀನು ಮಾಡುತ್ತಿರುವುದು ತಪ್ಪು ಎಂದು ಸಂತೈಸಲು ಯತ್ನಿಸುತ್ತಾರೆ. ಆಕೆಯನ್ನು ತಳ್ಳುವ ವಿದ್ಯಾರ್ಥಿನಿಯು ಹಲ್ಲೆ ಕೂಡ ಮಾಡುತ್ತಾಳೆ. ಅದು ಕೂಡ ಫೋನ್ ರಿಸೀವರ್ ಎತ್ತಿ ಶಿಕ್ಷಕಿಯ ಮೇಲೆ ಬಿಸಾಡುತ್ತಾಳೆ. ಈ ವಿಡಿಯೊ ಭಾರಿ ಸದ್ದು ಮಾಡುತ್ತಿದ್ದು, ವರ್ಣಭೇದ ನೀತಿಯ ಸಂಪೂರ್ಣ ನಾಶಕ್ಕೆ ದೊಡ್ಡ ಹೋರಾಟವೇ ರೂಪುಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಶಾಲೆಯ ಆಡಳಿತ ಮಂಡಳಿಯಿಂದ ಈ ಘಟನೆ ಬಗ್ಗೆ ಇದುವರೆಗೂ ಸ್ಪಷ್ಟನೆ ನೀಡಲಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅಮೆರಿಕದಲ್ಲಿ ವಿದ್ಯಾರ್ಥಿಗಳು ಕಪ್ಪು ವರ್ಣೀಯರ ವಿರುದ್ಧ ಮನೋವಿಕಲ್ಪ ರೂಢಿಸಿಕೊಂಡು ಚೀರಾಡುತ್ತಿರುವುದು ಹೆಚ್ಚುತ್ತಿದೆ ಎಂದು ಅನೇಕ ಟ್ವೀಟಿಗರು ಪ್ರತಿಕ್ರಿಯೆ ನೀಡಿ ಆತಂಕ ಹೊರಹಾಕಿದ್ದಾರೆ.
ಕಪ್ಪುವರ್ಣೀಯ ಟೀಚರ್ಗೆ ಶಾಲೆಯು ವೇತನ ನೀಡುತ್ತಿರುವುದು ಪಾಠ ಮಾಡಲು ಮಾತ್ರವೇ ಹೊರತು, ವಿದ್ಯಾರ್ಥಿಗಳಿಂದ ಇಂಥ ಉದ್ಧಟತನ ಸಹಿಸಿಕೊಳ್ಳಲು ಅಲ್ಲ ಎಂದು ಟ್ವೀಟಿಗರೊಬ್ಬರು ಶಾಲೆ ವಿರುದ್ಧ ಕೂಡ ಚಾಟಿ ಬೀಸಿದ್ದಾರೆ.
https://twitter.com/HereticalTeacup/status/1462484288486707206?ref_src=twsrc%5Etfw%7Ctwcamp%5Etweetembed%7Ctwterm%5E1462484288486707206%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fus-teenager-hits-racially-abuses-teacher-in-classroom-black-teacher-viral-video-outrage-4472615.html