ಕೊರೋನಾ ಲಸಿಕೆ ಚುಚ್ಚುಮದ್ದು ಪಡೆಯಲು ಭಯಪಡುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೊರೋನಾ ನಿರೋಧಕ ಮಾತ್ರೆ ಸೇವಿಸುವ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ. ಅಲ್ಲದೇ ಶ್ವಾಸಕೋಶಕ್ಕೆ ಆಗುವ ಆನೆಯನ್ನು ಕೂಡ ತಗ್ಗಿಸಬಹುದು.
ಕೊರೋನಾ ನಿರೋಧಕ ಮಾತ್ರೆ ಮಾನವನ ಮೇಲೆ ಶೀಘ್ರವೇ ಪ್ರಯೋಗಿಸಲಾಗುತ್ತದೆ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ಮೋಲ್ನುಪಿರಾವಿರ್ ಔಷಧ ಇಲಿಗಳ ಮೇಲಿನ ಪ್ರಯೋಗದಲ್ಲಿ ಪರಿಣಾಮಕಾರಿ ಎನ್ನುವುದು ಗೊತ್ತಾಗಿದೆ. ಈ ಮಾತ್ರೆ ವೇಗವಾಗಿ ವೈರಸ್ ನಿಯಂತ್ರಿಸುತ್ತದೆ. ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವ ಜೊತೆಗೆ ಸೋಂಕು ಹರಡುವುದನ್ನು ಹತ್ತಿಕ್ಕುವ ಈ ಮಾತ್ರೆ ಶೀಘ್ರವೇ ಮಾನವನ ಮೇಲೆ ಪ್ರಯೋಗವಾಗಲಿದೆ.
ಸೋಂಕಿಗೆ ತುತ್ತಾದವರು ಮತ್ತು ಸೋಂಕು ತಗಲುವ ಸಾಧ್ಯತೆ ಇರುವವರು ಮಾತ್ರೆಯನ್ನು ಸೇವಿಸುವುದರಿಂದ ರಕ್ಷಣೆ ಪಡೆದುಕೊಳ್ಳಬಹುದು ಎಂದು ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆ ವಿಜ್ಞಾನಿಗಳು ಹೇಳಿದ್ದಾರೆ.