ಕೋವಿಡ್ ಕಾಟದಿಂದ ಎರಡು ವರ್ಷಗಳಿಂದ ಮಾವಿನ ಹಣ್ಣುಗಳನ್ನು ಅಮೆರಿಕಕ್ಕೆ ಕಳುಹಿಸದೇ ಇದ್ದ ಭಾರತ, ಇದೇ ಫೆಬ್ರವರಿಯಿಂದ ದೊಡ್ಡಣ್ಣನಿಗೆ ಹಣ್ಣುಗಳ ರಾಜನನ್ನು ಮತ್ತೆ ಕಳುಹಿಸಿಕೊಡಲಿದೆ.
ಫೆಬ್ರವರಿಯಿಂದ ಮಾವಿನಹಣ್ಣುಗಳು ಮತ್ತು ಏಪ್ರಿಲ್‌ನಿಂದ ದಾಳಿಂಬೆ ಹಣ್ಣುಗಳನ್ನು ಭಾರತ, ಅಮೆರಿಕಕ್ಕೆ ಕಳುಹಿಸಿದರೆ ಅಲ್ಲಿಂದ ನಮಗೆ ಚೆರ‍್ರಿಗಳು ಮತ್ತು ಅಲ್ಫಾಲ್ಫಾ ಹಣ್ಣುಗಳು ಬರಲಿವೆ. ಕೃಷಿ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯುವ ಸಂಬಂಧ ದೆಹಲಿ-ವಾಷಿಂಗ್ಟನ್ ನಡುವೆ ಒಡಂಬಡಿಕೆಯೊಂದನ್ನು ಈ ಸಂಬಂಧ ಮಾಡಿಕೊಳ್ಳಲಾಗಿದೆ.
ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೈತ: ಪಿಂಚಣಿ ಪರಿಶೀಲನೆಗೆಂದು ತೆರಳಿದವನಿಗೆ ಶಾಕ್….!
ಭಾರತದ ಜನಪ್ರಿಯ ಮಾವಿನ ತಳಿಗಳಾದ ’ಅಲ್ಫೋನ್ಸೋ’ ’ದಸ್ಸೇಹ್ರೀ’ ಮತ್ತು ’ಲಂಗ್ಡಾ’ಗಳು ಅಮೆರಿಕದ ಅಂಗಡಿಗಳಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿವೆ
2007ರಿಂದ ಅಮೆರಿಕಕ್ಕೆ ಭಾರತದ ಮಾವಿನ ಹಣ್ಣುಗಳು ಹೋಗುತ್ತಿದ್ದು, 2011ರಿಂದ ಈ ಸಾಗಾಟ ಇನ್ನಷ್ಟು ಜೋರಾಗುತ್ತಾ ಬಂದಿದೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್‌ನ ಹಣ್ಣುಗಳು ಹೆಚ್ಚಾಗಿ ಅಮೆರಿಕಕ್ಕೆ ತೆರಳುತ್ತವೆ.
ಭಾರತವು ವಾರ್ಷಿಕ 50,000 ಮೆಟ್ರಿಕ್ ಟನ್‌ನಷ್ಟು ಮಾವಿನ ಹಣ್ಣುಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ ಅಮೆರಿಕದ್ದು 1,300 ಟನ್‌ಗಳಷ್ಟು ಪಾಲು ಇದೆ.