ವಾಷಿಂಗ್ಟನ್ ಡಿಸಿ: ಅಮೆರಿಕದ ಸರ್ಜನ್ ಜನರಲ್ ಆಗಿ ಕನ್ನಡಿಗ ಡಾ. ವಿವೇಕ್ ಮೂರ್ತಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೇಗೆರೆಯ ವಿವೇಕ್ ಮೂರ್ತಿ ಅಮೆರಿಕದ ಪ್ರಖ್ಯಾತ ವೈದ್ಯರಾಗಿದ್ದು ಸಾರ್ವಜನಿಕ ಆರೋಗ್ಯ ಸೇವೆ ಆಯೋಗದ ತಂಡದಲ್ಲಿ ವೈಸ್ ಅಡ್ಮಿರಲ್ ಆಗಿದ್ದರು.
ಅಮೆರಿಕದ ಸೆನೆಟ್ ನಲ್ಲಿ ಬಹುಮತದೊಂದಿಗೆ ಅವರು ಸರ್ಜನ್ ಜನರಲ್ ಆಗಿ ಆಯ್ಕೆಯಾಗಿದ್ದಾರೆ ಬರಾಕ್ ಒಬಾಮಾ ಕಾಲದಲ್ಲಿಯೂ ಅವರು ಜನರಲ್ ಸರ್ಜನ್ ಆಗಿದ್ದರು. ಬೈಡನ್ ಅವಧಿಯಲ್ಲಿ ಅಮೆರಿಕದಲ್ಲಿ ಭಾರತೀಯ ಮೂಲದವರಿಗೆ ಉನ್ನತ ಹುದ್ದೆಗಳು ದೊರೆತಿವೆ.
ಒಬಾಮಾ ಆಡಳಿತದಲ್ಲಿ ವಿವೇಕ್ ಮೂರ್ತಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದು 2017 ರಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರದ ಅವಧಿಯಲ್ಲಿ ಹುದ್ದೆ ತೊರೆದಿದ್ದರು.
ಕಳೆದ ಒಂದು ವರ್ಷದಲ್ಲಿ ಕೊರೊನಾದಿಂದ ಬಹಳ ಕಷ್ಟ ಸಹಿಸಿಕೊಂಡಿದ್ದೇವೆ. ಇದನ್ನು ನಿವಾರಿಸಿ ನಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಅಗತ್ಯವಾದ ಕೆಲಸ ಮಾಡುತ್ತೇವೆ ಎಂದು ವಿವೇಕ್ ಮೂರ್ತಿ ಹೇಳಿದ್ದಾರೆ.