ನವದೆಹಲಿ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ತಡ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬ್ಲಿಂಕೆನ್ ಅವರ ಮೊದಲ ಭಾರತ ಭೇಟಿ ಮತ್ತು ಜನವರಿಯಲ್ಲಿ ಬಿಡೆನ್ ಅಧಿಕಾರಕ್ಕೆ ಬಂದ ನಂತರ ಉನ್ನತ ಶ್ರೇಣಿಯ ಆಡಳಿತ ಅಧಿಕಾರಿಯೊಬ್ಬರು ಮಾಡಿದ ಮೂರನೇ ಭೇಟಿ ಇದಾಗಿದೆ.
ಮಂಗಳವಾರ ಅಂದರೆ ಇಂದು ರಾತ್ರಿ ದೆಹಲಿಗೆ ಆಗಮಿಸಲಿರುವ ಬ್ಲಿಂಕೆನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಲಿದ್ದಾರೆ. ಹಾಗೂ ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಕುವೈತ್‌ಗೆ ತೆರಳುವ ಮುನ್ನ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!
‘’ಕಾರ್ಯದರ್ಶಿ ಬ್ಲಿಂಕೆನ್ ಅವರ ಭೇಟಿ ಉನ್ನತ ಮಟ್ಟದ ದ್ವಿಪಕ್ಷೀಯ ಸಂವಾದವನ್ನು ಮುಂದುವರಿಸಲು ಮತ್ತು ಭಾರತ-ಯುಎಸ್ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸಲು ಒಂದು ಅವಕಾಶವಾಗಿದೆ”ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಬ್ಲಿಂಕೆನ್ ಅವರ ಭಾರತ ಭೇಟಿಯು ಅಫ್ಘಾನಿಸ್ತಾನದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಒಳಗೊಂಡ ವ್ಯಾಪಕವಾದ ಕಾರ್ಯಸೂಚಿಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗಿದೆ.