ಅಮೆರಿಕಾದಲ್ಲಿ ವಾಸಿಸುವ ಸಲೂನ್ನ ಮಾಲೀಕರ ಕೆಲಸ ಈಗ ಚರ್ಚೆಗೆ ಕಾರಣವಾಗಿದೆ. ಉದ್ಯೋಗಿಯ ಕೆಲಸ ಮೆಚ್ಚಿಕೊಂಡ ಸಲೂನ್ ಮಾಲೀಕರು ಕೇವಲ 1 ಡಾಲರ್ ಅಂದ್ರೆ 75 ರೂಪಾಯಿಗೆ ಸಲೂನ್ ಮಾರಾಟ ಮಾಡಿದ್ದಾರೆ.
ಸಲೂನ್ನ ಮಾಲೀಕರ ಹೆಸರು ಪಿಯೋ ಇಂಪರತಿ. ಕೇಶ ವಿನ್ಯಾಸಕಿ ಕ್ಯಾಥಿ ಮೌರಾ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಕೆಲಸ ಮಾಡುವ ಮೂಲಕ ಆಕರ್ಷಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರ ಸ್ನೇಹ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಇಟಲಿಯ ನನ್ನ ಸಲೂನನ್ನು ಕೇವಲ 1 ರೂಪಾಯಿಗೆ ಮಾರಾಟಮಾಡಿದ್ದೇನೆಂದು ಪಿಯೋ ಹೇಳಿದ್ದಾರೆ.
ಅಂಗಡಿ ಬಾಡಿಗೆಯನ್ನು ಪಿಯೋ ಭರಿಸಲಿದ್ದಾರೆ. ಪ್ರೌಢಶಾಲೆ ಮುಗಿದ ನಂತ್ರ ಕ್ಯಾಥಿಗೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ. ಅನುಭವವಿಲ್ಲ ಎಂಬ ಕಾರಣಕ್ಕೆ ಕೆಲಸ ನೀಡಿರಲಿಲ್ಲ. ಆದ್ರೆ ಪಿಯೋ ಕೆಲಸ ನೀಡಿದ್ದರು. ಒಂದು ದಿನ ಸ್ವಂತ ಸಲೂನ್ ಹೊಂದುವ ಕನಸು ಹೊಂದಿದ್ದೆ. ಈಗ ಕನಸು ಈಡೇರಿದೆ. ಮಾಲೀಕರು ನನ್ನ ಕೆಲಸ ಮೆಚ್ಚಿ ಸಲೂನ್ ನೀಡಿದ್ದು ನನ್ನ ಸಂತೋಷ ಇಮ್ಮಡಿಗೊಳಿಸಿದೆ ಎಂದು ಕ್ಯಾಥಿ ಹೇಳಿದ್ದಾರೆ.