ನವದೆಹಲಿ: ಉದ್ಯೋಗಿಗಳಿಗೆ ನೀಡುವ ಹೆಚ್1- ಬಿ ವೀಸಾ ನಿಯಮವನ್ನು ಅಮೆರಿಕ ಪರಿಷ್ಕರಿಸಿದೆ. ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋಒ ಬೈಡನ್ ಅವರ ಆಡಳಿತ ಅವಧಿಯಲ್ಲಿ ಕೈಗೊಂಡಿರುವ ಕೊನೆಯ ಮಹತ್ವದ ಕ್ರಮ ಇದಾಗಿದೆ. ಕೌಶಲಭರಿತ ಉದ್ಯೋಗಿಗಳು ಅವರ ಉದ್ಯೋಗದ ಸ್ಥಿತಿಯನ್ನು ಆಧರಿಸಿ ಅಮೆರಿಕದಲ್ಲಿ ನೆಲೆಸಬಹುದು ಎಂದು ಹೇಳಲಾಗಿದೆ.
ಮಂಜೂರು ಮಾಡುವ ಪ್ರಕ್ರಿಯೆಯನ್ನು ಪರಿಷ್ಕರಿಸಲಾಗಿದ್ದು, ಹೊಸ ಕಾನೂನಿನ ಪ್ರಕಾರ ಪ್ರತಿಭಾವಂತ ನೌಕರರನ್ನು ಉಳಿಸಿಕೊಳ್ಳಲು ಉದ್ಯಮಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಈ ಮಾಹಿತಿಯನ್ನು ಅಮೆರಿಕದ ಪೌರತ್ವ ಹಾಗೂ ವಲಸೆ ನೀತಿ ಸೇವೆಗಳು(USCIS) ಅಂತರ್ಜಾಲ ಪೇಜ್ ನಲ್ಲಿ ಹಂಚಿಕೊಂಡಿದೆ,