alex Certify BIG NEWS: ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಸೆಲ್ಫಿ ಬಿಡುಗಡೆಗೊಳಿಸಿದ ಅಮೆರಿಕಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಸೆಲ್ಫಿ ಬಿಡುಗಡೆಗೊಳಿಸಿದ ಅಮೆರಿಕಾ…!

ಅಮೆರಿಕಾದ ಆಗಸದಲ್ಲಿ ಸಂಚರಿಸುತ್ತಾ ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಅನ್ನು ಫೆಬ್ರವರಿ 5ರಂದು ಅಮೆರಿಕಾದ ವಾಯುಸೇನೆ ಹೊಡೆದುರುಳಿಸಿತ್ತು. ಈ ಬಲೂನ್ ಜನವರಿ 28ರಂದು ಅಮೆರಿಕ ವಾಯು ನೆಲೆಯನ್ನು ಪ್ರವೇಶಿಸಿತ್ತು ಎಂದು ಹೇಳಲಾಗಿದೆ.

ಇದನ್ನು ಅಮೇರಿಕಾ ವಾಯುಪಡೆ ಹೊಡೆದುರುಳಿಸುವ ಮುನ್ನ ಚೀನಾ, ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಈ ಕುರಿತು ಉಭಯ ರಾಷ್ಟ್ರಗಳ ನಡುವೆ ಚಕಮಕಿ ನಡೆದಿದೆ.

ಇದರ ಮಧ್ಯೆ ಅಮೆರಿಕಾ ರಕ್ಷಣಾ ಸಚಿವಾಲಯ ಯು-2 ಸ್ಪೈ ಪ್ಲೇನ್ ಪೈಲೆಟ್ ತೆಗೆದುಕೊಂಡಿರುವ ಸೆಲ್ಫಿಯನ್ನು ಬಿಡುಗಡೆಗೊಳಿಸಿದೆ. 60,000 ಅಡಿ ಎತ್ತರದಲ್ಲಿ ಬೆಳ್ಳಿ ಬಣ್ಣದ ಈ ಬಲೂನ್ ಹಾರಾಟ ನಡೆಸುತ್ತಿರುವಾಗ ಈ ಸೆಲ್ಫಿ ತೆಗೆದುಕೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...