ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಉತ್ತೇಜನ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವ ಅಮೆರಿಕ ಸರ್ಕಾರ, ಈ ನಿಟ್ಟಿನಲ್ಲಿ ಬಹಳಷ್ಟು ಕೂಲ್ ಐಡಿಯಾಗಳನ್ನು ಪ್ರಯೋಗ ಮಾಡುತ್ತಿದೆ.
ಯುವಕರನ್ನು ಲಸಿಕೆಯತ್ತ ಸೆಳೆಯಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಸಾಮಾಜಿಕ ಜಾಲತಾಣದ ಸ್ಟಾರ್ ’ಡ್ಯೂಡ್ ವಿತ್ ಸೈನ್’ಗೆ ವಹಿಸಿದ್ದಾರೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳೋಣ ಎಂಬ ಭಿತ್ತಿಪತ್ರಗಳನ್ನು ಹಿಡಿದ ’ಡ್ಯೂಡ್’ ಮತ್ತು ಬಿಡೆನ್ರ ಫೋಟೋ ವೈರಲ್ ಆಗಿವೆ.
ನ್ಯೂಯಾರ್ಕ್ನ ಬೀದಿಗಳಲ್ಲಿ ವಿಶಿಷ್ಟವಾದ ಸಲಹೆಗಳ ಭಿತ್ತಿಪತ್ರಗಳನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಎದ್ದು ಕಾಣುತ್ತಿರುವ ಸೇತ್ ಫಿಲಿಪ್ಸ್ ಹೆಸರಿನ ಈತ ನೆಟ್ಟಿಗರ ಪಾಲಿನ ಫೇವರಿಟ್ ಆಗಿದ್ದಾರೆ.
https://www.instagram.com/p/CShSOmDsPrQ/?utm_source=ig_web_copy_link