ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಪ್ರೇಮಕ್ಕೆ ನಾಲ್ಕು ದಶಕಗಳಾಗಿವೆ. ಅವರ ಕುತೂಹಲದ ಕಥನ ಈಗ ವೈರಲ್ ಆಗಿದೆ. ಜೋ ಬೈಡೆನ್ ಅವರ ಮದುವೆಯ ಪ್ರಸ್ತಾಪವನ್ನು ಅವರ ಪತ್ನಿ ಐದು ಬಾರಿ ತಿರಸ್ಕರಿಸಿದ್ದರು ಎಂಬ ಅಂಶ ಈಗ ಬಯಲುಗೊಂಡಿದೆ.
ಈ ಕುರಿತು ಜೋ ಬೈಡೆನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ನಟಿ ಬ್ಯಾರಿಮೋರ್ ಅವರು ಈ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ತಮ್ಮನ್ನು ಜಿಲ್ ಐದು ಬಾರಿ ತಿರಸ್ಕರಿಸಿದ್ದನ್ನು ಹೇಳಿದ್ದಾರೆ. ಜಿಲ್ ಎರಡು ಬಾರಿ ಸಿಕ್ಕಾಗಲೂ ಆಕೆಯೇ ನನ್ನ ಪತ್ನಿಯಾಗಲು ಯೋಗ್ಯ ಎಂದುಕೊಂಡೆ. ಲವ್ ಎಟ್ ಫಸ್ಟ್ ಸೈಟ್ ಆಗಿತ್ತು ಎಂದು ಜೋ ಬೈಡೆನ್ ಹೇಳಿದರು.
ಮೊದಲ ಪತ್ನಿಯ ಮಕ್ಕಳಾದ ಬ್ಯೂ ಮತ್ತು ಹಂಟರ್ ಅವರೇ ನನ್ನ ಎರಡನೆಯ ಮದುವೆಗೆ ಪ್ರಚೋದಿಸಿದರು. ಜಿಲ್ ಅವರನ್ನು ಹೋಗಿ ಕೇಳುವಂತೆ ಹೇಳಿದರು. ಆದರೆ ಐದು ಬಾರಿ ಜಿಲ್ ನಿರಾಕರಿಸಿಳು ಎಂದು ಜೋ ಬೈಡೆನ್ ಹೇಳಿದ್ದಾರೆ. ನಂತರ ಕೊನೆಗೂ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ಬೈಡೆನ್ ಅವರ ಮೊದಲ ಪತ್ನಿ ನೀಲಿಯಾ ಹಂಟರ್ ಬಿಡೆನ್ ಮತ್ತು ಅವರ ಒಂದು ವರ್ಷದ ಮಗಳು ನವೋಮಿ 1972 ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಅವರು 1977 ರಲ್ಲಿ ಜಿಲ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಆಶ್ಲೇ ಬಿಡೆನ್ ಎಂಬ ಮಗಳು ಇದ್ದಾಳೆ.