ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್-19 ಲಸಿಕೆಯ ಬೂಸ್ಟರ್ ಶಾಟ್ ಅನ್ನು ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಪಡೆದಿದ್ದಾರೆ. ಅಮೆರಿಕದ ಫೆಡರಲ್ ಆರೋಗ್ಯಾಧಿಕಾರಿಗಳ ಸಮ್ಮತಿಯ ಮೇರೆಗೆ ಫೈಜ಼ರ್ನ ಮೂರನೇ ಡೋಸ್ ಅನ್ನು ಬಿಡೆನ್ ಪಡೆದಿದ್ದಾರೆ.
“ಈ ಸಾಂಕ್ರಾಮಿಕವನ್ನು ಮಣಿಸಿ, ಜೀವಗಳನ್ನು ಉಳಿಸಲು, ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು, ನಮ್ಮ ಶಾಲೆಗಳನ್ನು ಮರು ಆರಂಭಿಸಲು, ನಮ್ಮ ಆರ್ಥಿಕತೆಗೆ ಚಾಲನೆ ನೀಡಲು, ಜನರಿಗೆ ಲಸಿಕೆ ಹಾಕಿಸಬೇಕೆಂದು ನಮಗೆ ಗೊತ್ತಿದೆ. ಆದ್ದರಿಂದ ದಯವಿಟ್ಟು, ಸರಿಯಾದ ಕೆಲಸ ಮಾಡಿ. ದಯವಿಟ್ಟು ಈ ಬೂಸ್ಟರ್ ಶಾಟ್ಗಳನ್ನು ಪಡೆಯಿರಿ. ಇದು ನಿಮ್ಮ ಹಾಗೂ ನಿಮ್ಮ ಸುತ್ತಲಿನ ಮಂದಿ ಜೀವಗಳನ್ನು ಉಳಿಸಬಲ್ಲದು,” ಎಂದು ಬಿಡೆನ್ ತಿಳಿಸಿದ್ದಾರೆ.
ಆಸ್ತಿಗಳ ನಗದೀಕರಣಕ್ಕೆ 12 ನಿಲ್ದಾಣಗಳನ್ನು ಗುರುತಿಸಿದ ಭಾರತೀಯ ರೈಲ್ವೇ
ಅಧ್ಯಕ್ಷರಾಗಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಸ್ವೀಕರಿಸುವ ಮುನ್ನ, ಜನವರಿಯಲ್ಲಿ, ಬಿಡೆನ್ ಕೋವಿಡ್-19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿದ್ದರು. ತಾವು 65ಕ್ಕಿಂತ ಬಹಳವೇ ಹೆಚ್ಚಾಗಿ ಹಿರಿಯರಾದ ಕಾರಣ ಲಸಿಕೆ ಪಡೆಯಲು ಅರ್ಹರು ಎಂದು ಬಿಡೆನ್ ಜೋಕ್ ಮಾಡಿದ್ದರು.
“ನೀವು ಈ ವರ್ಗಗಳಿಗೆ ಸೇರಿದರೆ, ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರು. ಈಗ ಅದು ಹಾಗೆ ಅನಿಸುವುದಿಲ್ಲ, ಆದರೆ ನಾನು 65ಕ್ಕಿಂತ ಹೆಚ್ಚು ವಯಸ್ಸಾದವನು. ಹಾಗಾಗಿಯೇ ನಾನು ಇಂದು ಬೂಸ್ಟರ್ ಶಾಟ್ ಪಡೆಯುತ್ತಿದ್ದೇನೆ. ಬೂಸ್ಟರ್ಗಳು ಬಹಳ ಮುಖ್ಯವಾದವು, ಆದರೆ ಎಲ್ಲಕ್ಕಿಂತ ಮುಖ್ಯವಾದುದೆಂದರೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ಹಾಕಿಸುವುದು,”
“ಅಮೆರಿಕದ 77 ಪ್ರತಿಶತದಷ್ಟು ವಯಸ್ಕರು ಲಸಿಕೆಯ ಕನಿಷ್ಠ ಒಂದು ಶಾಟ್ ಪಡೆದಿದ್ದಾರೆ. 23 ಪ್ರತಿಶತದಷ್ಟು ಮಂದಿ ಇನ್ನೂ ಒಂದೇ ಒಂದು ಶಾಟ್ ಪಡೆದಿಲ್ಲ. ಈ ಅಲ್ಪರಿಂದಲೇ ನಮ್ಮ ದೇಶಕ್ಕೆ ಭಾರೀ ನಷ್ಟವಾಗುತ್ತಿದೆ. ಇದು ಲಸಿಕೆ ಪಡೆಯದವರ ಸಾಂಕ್ರಮಿಕ. ಅದಕ್ಕಾಗಿಯೇ ನಾನು ಬೇಕಾದಾಗೆಲ್ಲಾ ಲಸಿಕೆ ಪಡೆಯುತ್ತಿದ್ದೇನೆ” ಎಂದು ಬಿಡೆನ್ ತಿಳಿಸಿದ್ದಾರೆ.