ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಅಮೆರಿಕಾದ ಫೆನ್ಸಿಂಗ್ ತಂಡವು ಗುಲಾಬಿ ಬಣ್ಣದ ಮಾಸ್ಕ್ ಧರಿಸುವ ಮೂಲಕ ತನ್ನದೇ ತಂಡದ ಆಟಗಾರನ ವಿರುದ್ಧ ಈ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಅಮೆರಿಕಾದ ಅಲೆನ್ ಹಡ್ಜಿಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಹೀಗಿದ್ದರೂ ಆತ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವುದಕ್ಕೆ ತನ್ನದೇ ತಂಡದ ಆಟಗಾರರು ಗುಲಾಬಿ ಬಣ್ಣದ ಮಾಸ್ಕ್ ಧರಿಸುವ ಮುಖಾಂತರ ಪ್ರತಿಭಟನೆ ನಡೆಸಿದ್ದಾರೆ. ಆದರೆ ಹಡ್ಜಿಕ್ ಮಾತ್ರ ತನ್ನ ಮೇಲಿರುವ ಆರೋಪವನ್ನು ನಿರಾಕರಿಸಿದ್ದು, ಕಪ್ಪು ಬಣ್ಣದ ಮುಖಗವಸು ಧರಿಸಿದ್ದಾರೆ.
BIG NEWS: ಕೇರಳದಲ್ಲಿ 3ನೇ ಅಲೆ ಸ್ಫೋಟ; ಆಗಸ್ಟ್ ನಲ್ಲಿ ರಾಜ್ಯಕ್ಕೂ ಅಪ್ಪಳಿಸುವ ಭೀತಿ; ಈಗಲಾದರೂ ಮುಂಜಾಗೃತೆ ಕೈಗೊಳ್ಳಿ; ಸರ್ಕಾರಕ್ಕೆ HDK ಸಲಹೆ
ಆಟಗಾರರಾದ ಜೇಕ್ ಹೋಯ್ಲ್, ಕರ್ಟಿಸ್ ಮೆಕ್ ಡೊವಾಲ್ಡ್ ಹಾಗೂ ಯೆಸ್ಸರ್ ರಾಮಿರೆಜ್ ಗುಲಾಬಿ ಬಣ್ಣದ ಮುಖಗವಸು ಧರಿಸಿದ್ದರೆ, ಹಡ್ಜಿಕ್ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದಾರೆ.
ಇನ್ನು ವರದಿಯ ಪ್ರಕಾರ, ಅಲೆನ್ ಹಡ್ಜಿಕ್ ವಿರುದ್ಧ ಮೂರು ಆರೋಪಗಳಿವೆ ಎಂದು ಹೇಳಲಾಗಿದೆ. ಇದಿನ್ನೂ ತನಿಖೆಯ ಹಂತದಲ್ಲಿದೆ ಎನ್ನಲಾಗಿದೆ. ಸದ್ಯ ಈತನನ್ನು ಸಂಸ್ಥೆಯೊಂದರಿಂದ ಅಮಾನತು ಮಾಡಲಾಗಿದೆ. ಆದರೆ ದೇಶಕ್ಕಾಗಿ ಆಟವಾಡಲು ಟೋಕಿಯೊಗೆ ಕಳಿಸಲಾಗಿದೆ. ಅಲ್ಲದೆ ಅವನನ್ನು ಸಹ ಆಟಗಾರರಿಂದ ದೂರವಿರಿಸಲಾಯಿತು. ಮಹಿಳಾ ಆಟಗಾರ್ತಿಯರ ಜೊತೆ ಅಭ್ಯಾಸ ಮಾಡಲು ಅವಕಾಶ ನೀಡದೆ ಪ್ರತ್ಯೇಕವಾಗಿ ಜಪಾನ್ ಗೆ ಕಳುಹಿಸಲಾಯಿತು ಎನ್ನಲಾಗಿದೆ.