ಆಸ್ಪತ್ರೆಗಳ ಉದಾಸೀನ, ನಿರ್ಲಕ್ಷ್ಯ ಅಥವಾ ತಪ್ಪು ಚಿಕಿತ್ಸೆಯಿಂದ ರೋಗಿಗಳ ಸಾವಿನ ಪ್ರಕರಣಗಳು ಭಾರತದಲ್ಲಿ ಆಗಾಗ್ಗೆ ಸುದ್ದಿ ಮಾಡುತ್ತವೆ. ಆದರೆ ವಿಶ್ವದ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದೆ ಎಂದು ನಂಬಲಾದ ಅಮೆರಿಕಾದಲ್ಲಿ ಸಹ ಇಂತಹದ್ದೊಂದು ಪ್ರಸಂಗ ನಡೆದಿದೆ.
ವಿಸ್ಕಾನ್ಸಿನ್ ನರ್ಸ್ ವೈದ್ಯರ ಅಥವಾ ರೋಗಿಯ ಒಪ್ಪಿಗೆಯಿಲ್ಲದೆ ವ್ಯಕ್ತಿಯ ಪಾದವನ್ನು ಕತ್ತರಿಸಿದ ನಂತರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.
ಸ್ಥಳೀಯ ಸುದ್ದಿವಾಹಿನಿಯೊಂದರ ಪ್ರಕಾರ, ಮಾರ್ಚ್‌ನಲ್ಲಿ ಸ್ಪ್ರಿಂಗ್ ವ್ಯಾಲಿ ಹೆಲ್ತ್ ಅಂಡ್ ರಿಹ್ಯಾಬ್ ಸೆಂಟರ್‌ಗೆ ಕರೆತಂದ ಅರವತ್ತೆರೆಡು ವರ್ಷದ ವ್ಯಕ್ತಿ ಸಾಯುವ ಸ್ಥಿತಿಯಲ್ಲಿದ್ದರು. ಅವರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ಮೇರಿ ಕೆ ಬ್ರೌನ್ ಎಂಬ ನರ್ಸ್ ಆರೈಕೆಯಲ್ಲಿ ಇರಿಸಲಾಗಿತ್ತು. ಮೇ 27 ರಂದು, ಮೇರಿ ಬ್ರೌನ್ ರೋಗಿಯ ಪಾದಗಳಲ್ಲಿ ಒಂದನ್ನು ಕತ್ತರಿಸಿದರು.
ವ್ಯಕ್ತಿಯ ಪಾದವನ್ನು ಕತ್ತರಿಸಿದ ನಂತರ, ತನ್ನ ಕುಟುಂಬವು ಹೊಂದಿದ್ದ ಟ್ಯಾಕ್ಸಿಡರ್ಮಿ (ಪ್ರದರ್ಶನ ಅಥವಾ ಅಧ್ಯಯನಕ್ಕೆ ವಿಧಾನ) ಯಲ್ಲಿ ಪಾದವನ್ನು ಪ್ರದರ್ಶಿಸಲು ಬಯಸಿದ್ದರು.
ನಂತರ ಪೊಲೀಸರು ವಿಚಾರಣೆಗೊಳಪಡಿಸಿದಾಗ, ಆ ವ್ಯಕ್ತಿಯ ಸೌಕರ್ಯಕ್ಕಾಗಿ ಕಾಳಜಿಯಿಂದ ಪಾದವನ್ನು ಕತ್ತರಿಸಿದ್ದೇನೆ ಎಂದು ಅವಳು ಹೇಳಿದ್ದಾಳೆ.
ಕ್ರಿಮಿನಲ್ ದೂರಿನಲ್ಲಿ ರೋಗಿಯ ನಿಜವಾದ ಸಾವಿನ ದಿನಾಂಕವನ್ನು ಉಲ್ಲೇಖಿಸಿಲ್ಲ. ಜೂನ್‌ನಲ್ಲಿ 62 ವರ್ಷದ ಆ ವ್ಯಕ್ತಿಯ ಶವಪರೀಕ್ಷೆ ನಡೆಸುತ್ತಿದ್ದ ಪಿಯರ್ಸ್ ಕೌಂಟಿಯ ವೈದ್ಯಕೀಯ ಪರೀಕ್ಷಕರ ಪ್ರಕಾರ ಮೃತ ವ್ಯಕ್ತಿಯ ಪಾದಗಳಲ್ಲಿ ಒಂದನ್ನು ತೆಗೆದುಹಾಕಲಾಗಿತ್ತು.
ಮೇರಿ ಮೇಲೆ ಎರಡು ಅಪರಾಧಗಳ ಆರೋಪ ಹೊರಿಸಲಾಗಿದೆ. ಅವರು ತಪ್ಪಿತಸ್ಥರಾದರೆ 92 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.