
ಸಿರಿಯಾದಲ್ಲಿ ಹಿರಿಯ ಅಲ್-ಖೈದಾ ನಾಯಕ ಮುಹಮ್ಮದ್ ಯೂಸುಫ್ ಜಿಯಾ ತಲಾಯ್ ಅವರನ್ನು ಅಮೆರಿಕ ಸೇನೆ ಹತ್ಯೆ ಮಾಡಿದೆ.
ಸಿರಿಯಾದಲ್ಲಿ ನಿಖರವಾದ ವಾಯುದಾಳಿ ನಡೆಸಿರುವುದಾಗಿ ಅಮೆರಿಕ ಸೆಂಟ್ರಲ್ ಕಮಾಂಡ್(CENTCOM) ಶನಿವಾರ ತಿಳಿಸಿದೆ. ಅಲ್-ಖೈದಾ ಅಂಗಸಂಸ್ಥೆಯಾದ ಹುರ್ರಾಸ್ ಅಲ್-ದಿನ್(HaD) ನ ಹಿರಿಯ ಮಿಲಿಟರಿ ನಾಯಕ ಮುಹಮ್ಮದ್ ಯೂಸುಫ್ ಜಿಯಾ ತಲಾಯ್ ಅವರನ್ನು ಹತ್ಯೆ ಮಾಡಿರುವುದಾಗಿ ಸೆಂಟ್ಕಾಮ್ ಹೇಳಿದೆ.
ನಾವು ಹಿಂದೆ ಹೇಳಿದಂತೆ, ನಮ್ಮ ತಾಯ್ನಾಡು ಮತ್ತು ಈ ಪ್ರದೇಶದಲ್ಲಿನ ಯುಎಸ್, ಮಿತ್ರಪಕ್ಷಗಳು ಮತ್ತು ಪಾಲುದಾರ ಸಿಬ್ಬಂದಿಯನ್ನು ರಕ್ಷಿಸಲು ನಾವು ಈ ಭಯೋತ್ಪಾದಕರನ್ನು ನಿರಂತರವಾಗಿ ಹಿಂಬಾಲಿಸಿ ಸದೆಬಡಿಯುತ್ತೇವೆ ಎಂದು ಸೆಂಟ್ಕಾಮ್ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.
ಫೆಬ್ರವರಿ 23 ರಂದು, ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ವಾಯುವ್ಯ ಸಿರಿಯಾದಲ್ಲಿ ನಿಖರವಾದ ವೈಮಾನಿಕ ದಾಳಿ ನಡೆಸಿ, ಹಿರಿಯ ಮಿಲಿಟರಿ ನಾಯಕ ಮುಹಮ್ಮದ್ ಯೂಸುಫ್ ಜಿಯಾ ತಲಾಯ್ ಅವರನ್ನು ಗುರಿಯಾಗಿಸಿಕೊಂಡು ಕೊಂದಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ.
ಈ ಕುರಿತಾಗಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
CENTCOM Forces Kill the Senior Military Leader of Al-Qaeda Affiliate Hurras al-Din (HaD) in Syria
On Feb. 23, U.S. Central Command (CENTCOM) forces conducted a precision airstrike in Northwest Syria, targeting and killing Muhammed Yusuf Ziya Talay, the senior military leader of… pic.twitter.com/trhDvgdgne
— U.S. Central Command (@CENTCOM) March 1, 2025