ವಿಶ್ವ ದಾಖಲೆಯನ್ನು ನಿರ್ಮಿಸಲು ನಿಗದಿತ ಮಾನದಂಡಗಳಿಲ್ಲ. ನೀವು ಯಾವುದೇ ವಿಷಯವನ್ನಿಟ್ಟುಕೊಂಡೂ ವಿಶ್ವ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಅಮೆರಿಕದ ಕೊಲೊರಾಡೋ ಮೂಲದ ವ್ಯಕ್ತಿ ತನ್ನ ಮೂಗಿನ ಸಹಾಯದಿಂದ ಕಡಲೆಕಾಯಿಯನ್ನು ಪರ್ವತದ ಮೇಲೆ ವೇಗವಾಗಿ ತಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 53 ವರ್ಷದ ಸೇಲಂ ಈ ರೀತಿಯ ದಾಖಲೆಯನ್ನು ನಿರ್ಮಿಸಿದ್ದಾರೆ.
ಅನೇಕರಿಗೆ ಈ ಸಾಧನೆ ವಿಚಿತ್ರ ಎನಿಸಿದರೂ ಸಹ ಸೇಲಂ ಪಾಲಿಗೆ ಇದು ಸುಲಭದ ಕೆಲಸವಂತೂ ಆಗಿರಲಿಲ್ಲ. ಜುಲೈ 9ರಂದು ಆರಂಭವಾದ ಕಡಲೆಕಾಯಿ ತಳ್ಳುವ ಕೆಲಸವು ಜುಲೈ 15ಕ್ಕೆ ಮುಕ್ತಾಯಗೊಂಡಿದೆ. ಕಡಲೆಕಾಯಿ ಸಮೇತ ಸೇಲಂ ಜುಲೈ 15ರಂದು ಪರ್ವತವನ್ನೇರಿದ್ದಾರೆ.
ಮ್ಯಾನಿಟೌ ಸ್ಟ್ರಿಂಗ್ಸ್ ನಗರ ಹಾಗೂ ಪುರಸಭೆಯ ಮೇಯರ್ ಜಾನ್ ಸುಥರ್ಸ್ ವಿಶ್ವ ದಾಖಲೆಯ ಪತ್ರವನ್ನು ನೀಡಿದಾಗ ಪ್ರೇಕ್ಷಕರ ಚಪ್ಪಾಳೆಯು ಸೇಲಂರನ್ನು ಉತ್ತುಂಗಕ್ಕೇರಿಸಿದೆ.
ಸಿಟಿ ಆಫ್ ಮ್ಯಾನಿಟೌ ಸ್ಪ್ರಿಂಗ್ಸ್ ಸರ್ಕಾರವು ತನ್ನ ಫೇಸ್‌ಬುಕ್ ಪೇಜ್ನಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ, ಅಲ್ಲಿ ಸೇಲಂ ದಾಖಲೆಯನ್ನು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸೇಲಂ ಅವರು ಮೊಣಕೈ ಮತ್ತು ಮೊಣಕಾಲು ಗಾರ್ಡ್‌ಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ.