ಅಮೆರಿಕದ ಉತಾಹ್‌ನಲ್ಲಿರುವ ಮಾಧ್ಯಮಿಕ ಶಾಲಾ ಶಿಕ್ಷಕನೊಬ್ಬ 20 ವರ್ಷಗಳ ಬಳಿಕ ತನ್ನ ಹೆತ್ತ ತಾಯಿಯನ್ನು ಪತ್ತೆ ಹಚ್ಚಿ ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ! ಬೆಂಜಮಿನ್ ಹುಲ್ಲೆಬರ್ಗ್ ಈ ರೀತಿ ಹೆತ್ತ ತಾಯಿಯ ಮಡಿಲು ಸೇರಿದ ವ್ಯಕ್ತಿ.
ಬಾಲ್ಯದಲ್ಲೇ ಬೆಂಜಮಿನ್ ಹೆತ್ತ ತಾಯಿಯಿಂದ ದೂರಾಗಿದ್ದರು. ಏಂಜೆಲಾ ಮತ್ತು ಬ್ರಿಯಾನ್ ಹುಲ್ಲೆಬರ್ಗ್ ದಂಪತಿ ಈತನನ್ನು ದತ್ತು ತೆಗೆದುಕೊಂಡಿದ್ದರು. ವರ್ಷಗಳ ನಂತರ ಹೆತ್ತ ತಾಯಿಯ ನೆನಪಾಗಿದೆ ಬೆಂಜಮಿನ್‌ಗೆ. ಆತ ನಿತ್ಯವೂ ಸಾಕು ತಂದೆ – ತಾಯಿ ಬಳಿ ಈ ವಿಚಾರ ಹೇಳುತ್ತಿದ್ದ. ಆದರೆ, ಹೆತ್ತ ತಾಯಿಯ ಪತ್ತೆ ಸಾಧ್ಯವಾಗಿರಲಿಲ್ಲ.
ಕೆಕೆ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಲಿ ಎಂದ ನಂದಿತಾ ಪುರಿ
ಇನ್ನೊಂದೆಡೆ ದತ್ತು ಕೊಟ್ಟು ಹದಿನೆಂಟು ವರ್ಷದ ಬಳಿಕ ಮಗನನ್ನು ನೋಡಬೇಕೆಂಬ ಹಂಬಲ ಹೆತ್ತ ತಾಯಿಗೂ ಕಾಡಿತ್ತು. ಆಕೆಯೂ ಆನ್‌ಲೈನ್‌ನಲ್ಲಿ ಮಗನ ಹುಡುಕಾಟ ಆರಂಭಿಸಿದ್ದಳು. ಫೇಸ್‌ಬುಕ್‌ನಲ್ಲಿ ಹುಡುಕಾಟ ನಡೆಸಿದ್ದ ಹೆತ್ತ ತಾಯಿ ಶೇರರ್, ಕಳೆದ ನವೆಂಬರ್‌ನಲ್ಲಿ ಮಗನನ್ನು ಪತ್ತೆ ಹಚ್ಚಿ ಸಂದೇಶ ರವಾನಿಸಿದ್ದಳು.
ಫೇಸ್‌ಬುಕ್‌ನಲ್ಲಿ ತಾಯಿಯ ಸಂದೇಶ ನೋಡಿ ಬೆಂಜಮಿನ್ ಬಹಳ ಸಂಭ್ರಮ ಪಟ್ಟು, ಸ್ಪಂದಿಸಿದ್ದ. ಎರಡು ದಶಕಗಳ ಬಳಿಕ ಹೆತ್ತ ತಾಯಿ ತನ್ನನ್ನು ಗುರುತಿಸಿದ್ದನ್ನು ಕಂಡು ಮಂತ್ರ ಮುಗ್ಧನಾಗಿಬಿಟ್ಟಿದ್ದ. ಇದಾಗಿ ಕೆಲವು ದಿನಗಳ ಬಳಿಕ ಪರಸ್ಪರ ಭೇಟಿ ಮಾಡುವ ಮಾತುಕತೆ ನಡೆದಿತ್ತು. ತಾಯಿ-ಮಗ ಇಬ್ಬರೂ ಒಂದೇ ಊರಿನಲ್ಲಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಂಭ್ರಮಿಸಿದರು. ಈ ವಿಚಾರವನ್ನು ಮಾಧ್ಯಮಗಳ ಜತೆಗೂ ಅವರು ಹಂಚಿಕೊಂಡಿದ್ದಾರೆ.