ಫ್ಯಾಂಟಸಿ ಫುಟ್ಬಾಲ್ ಲೀಗ್ನಲ್ಲಿ ಕೊನೆಯವರಾದ ಕಾರಣಕ್ಕೆ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ನಿರ್ಧರಿಸಿದ ಲೇ ಸ್ಯಾಂಡರ್ಲಿನ್ ಎಂಬ ಈತ ತನ್ನನ್ನು ತಾನು 24 ಗಂಟೆಗಳ ಕಾಲ ವಾಫಲ್ ಹೌಸ್ ಎಂಬಲ್ಲಿ ಬಂಧಿಯಾಗಿಟ್ಟುಕೊಂಡಿದ್ದಾರೆ.
ಶಿವಮೊಗ್ಗ, ಭದ್ರಾವತಿಗೆ ಪ್ರತ್ಯೇಕ ಲಾಕ್ ಡೌನ್ ಮಾರ್ಗಸೂಚಿ, ನಾಳೆಯಿಂದ ಲಸಿಕೆ ಅಭಿಯಾನ
ಜೂನ್ 18ರಂದು ಹೀಗೆ ಸ್ವಯಂ ದಿಗ್ಬಂಧನ ಹೇರಿಕೊಂಡ ಸ್ಯಾಂಡರ್ಲಿನ್, “ಬ್ರಾಂಡನ್ನ ಮಿಸಿಸಿಪ್ಪಿ ವಾಫಲ್ ಹೌಸ್ನಿಂದ ನಾನು ಲೈವ್ ಬರುತ್ತಿದ್ದೇನೆ. ನಾನು ಒಬ್ಬ ಲೂಸರ್ ಆಗಿದ್ದು, ಫ್ಯಾಂಟಸಿ ಫುಟ್ಬಾಲ್ ಲೀಗ್ನಲ್ಲಿ ಕೊನೆಯವನಾಗಿದ್ದೇನೆ. ಇದಕ್ಕೆ ಶಿಕ್ಷೆಯಾಗಿ ನಾನು ವಾಫಲ್ ಹೌಸ್ನಲ್ಲಿ 24 ಗಂಟೆಗಳ ಕಾಲ ಒಬ್ಬನೇ ಕಾಲ ಕಳೆಯಲಿದ್ದೇನೆ. ನಾನು ತಿನ್ನುವ ಪ್ರತಿಯೊಂದು ವಾಫಲ್ ಗಡಿಯಾರದ ಒಂದು ಗಂಟೆಯನ್ನು ತಳ್ಳಲಿದೆ. ಈಗ 4:07 ಸೆಂಟ್ರಲ್” ಎಂದು ತನ್ನ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾನೆ.
ನಾಯಿ ನಿಮ್ಮ ಚಪ್ಪಲಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ…..?
ಇದಾದ ಮೇಲೆ ಥ್ರೆಡ್ ಮೂಲಕ ತಾನು ತಿಂದ ವಾಫಲ್ಗಳ ಸಂಖ್ಯೆಯನ್ನು ಅಪ್ಡೇಟ್ ಮಾಡಿರುವ ಈತ, 15 ಗಂಟೆಗಳ ಅವಧಿಯಲ್ಲಿ 9 ವಾಫಲ್ಗಳನ್ನು ಗುಳುಂ ಮಾಡಿದ್ದಾರೆ.