ದೆಹಲಿಯ ಮಹಿಳೆ ಕನ್ನಿಕಾ ಗೋಯಲ್ ಪೊಲೀಸ್ ಠಾಣೆಯಲ್ಲಿ ತಮ್ಮ ಮಾಜಿ ಪತಿ ಹಾಗೂ ಅತ್ತೆಯ ವಿರುದ್ಧ ತಮ್ಮ ಮಗಳನ್ನು ಅಪಹರಣ ಮಾಡಿದ ಆರೋಪದ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯು ನೀಡಿರುವ ದೂರಿನ ಪ್ರಕಾರ ಮಗುವನ್ನು ನೇಪಾಳಕ್ಕೆ ಕರೆದೊಯ್ಯಲು ಇವರಿಬ್ಬರು ಸಂಚು ಹೂಡಿದ್ದರು ಎನ್ನಲಾಗಿದೆ.
ದೂರಿನ ಪ್ರಕಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಪುರುಷ ಹಾಗೂ ಮಹಿಳೆ ಇಬ್ಬರೂ ಅಮೆರಿಕದ ಪ್ರಜೆಗಳು ಎನ್ನಲಾಗಿದೆ.
ಕನ್ನಿಕಾ ಗೋಯಲ್ ಮತ್ತು ಅವರ ಪತಿ ಸ್ವಲ್ಪ ಸಮಯದವರೆಗೆ ಬೇರ್ಪಟ್ಟಿದ್ದಾರೆ. ಆದರೆ, ನ್ಯಾಯಾಲಯದ ಆದೇಶದ ಪ್ರಕಾರ, ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ತನ್ನ ತಂದೆ ಮತ್ತು ಅಜ್ಜಿಯನ್ನು ಭೇಟಿಯಾಗಲು ಕನ್ನಿಕಾ ಗೋಯಲ್ ತನ್ನ ಎಂಟು ವರ್ಷದ ಮಗಳನ್ನು ಕರೆತಂದಿದ್ದರು.
ಗೋಯಲ್ ಹಾಗೂ ಅವರ ಪತಿ ಕೆಲವು ಸಮಯದ ಹಿಂದಷ್ಟೇ ಬೇರೆಯಾಗಿದ್ದಾರೆ. ಕೋರ್ಟ್ನ ಆದೇಶದ ಪ್ರಕಾರ ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ತನ್ನ ತಂದೆ ಮತ್ತು ಅಜ್ಜಿಯನ್ನು ಭೇಟಿಯಾಗಲು ಕನ್ನಿಕಾ ಗೋಯಲ್ ತನ್ನ ಎಂಟು ವರ್ಷದ ಮಗಳನ್ನು ಕರೆತಂದಿದ್ದರು.
ಗೋಯಲ್ ದೆಹಲಿಯ ಏರೋಸಿಟಿಯ ಫೈವ್ ಸ್ಟಾರ್ ಹೋಟೆಲ್ನಲ್ಲಿ ಮಗುವನ್ನು ಬಿಟ್ಟಿದ್ದರು. ಆದರೆ ಮಾರ್ಚ್ 15ರ ರಾತ್ರಿ 9 ಗಂಟೆಯಿಂದ ಮಗಳು ಗೋಯಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಮಾರನೇ ದಿನ ಬೆಳಗ್ಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಕನ್ನಿಕಾ ಗೋಯಲ್ ಹೋಟೆಲ್ಗೆ ತೆರಳಿದ್ದಾರೆ. ಆದರೆ ಹೋಟೆಲ್ನಲ್ಲಿ ಮಗಳು, ಮಾಜಿ ಪತಿ ಹಾಗೂ ಅತ್ತೆ ಯಾರೂ ಕಾಣಿಸಲಿಲ್ಲ. ಪೊಲೀಸರ ಮೂಲಕ ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಮೂವರೂ ಹಿಂದಿನ ರಾತ್ರಿ 10:45ರ ಸುಮಾರಿಗೆ ಟ್ಯಾಕ್ಸಿಯಲ್ಲಿ ತೆರಳಿರುವುದು ಕಂಡು ಬಂದಿದೆ. ಸ್ವಲ್ಪ ಸಮಯದ ಬಳಿಕ ಅವರು ನೇಪಾಳದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿ ಪೊಲೀಸರು ನೇಪಾಳ ರಾಯಭಾರ ಕಚೇರಿ ಹಾಗೂ ಅಮೆರಿಕ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ.