
ಯುಎಸ್ ಕ್ಯಾಲಿಫೋರ್ನಿಯಾದಲ್ಲಿ ಕಾರಿನಲ್ಲಿ ಲೈಂಗಿಕ ಕಾರ್ಯಕರ್ತೆ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಅಚ್ಚರಿ ಅಂದ್ರೆ ಆತನ ಕಾರಿನ ಹಿಂದಿನ ಸೀಟ್ ನಲ್ಲಿ ಎಂಟು ತಿಂಗಳ ಮಗುವಿತ್ತು. ಕಾರ್ ನಲ್ಲಿ ಮಗು ಇರುವಾಗ್ಲೇ ಆತ, ಶಾರೀರಿಕ ಸಂಬಂಧ ಬೆಳೆಸಿದ್ದಾನೆ.
ಈಸ್ಟ್ ಹೋಲ್ಟ್ ಅವೆನ್ಯೂದಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾರನ್ನು ತಡೆದಾಗ ಪೊಲೀಸ್ ಕಣ್ಣಿಗೆ ಮಗು ಬಿದ್ದಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಮಗುವನ್ನು ವಶಕ್ಕೆ ಪಡೆದಿದೆ ಎಂದು ಪೊಮೊನಾ ಪೊಲೀಸ್ ಇಲಾಖೆ ತಿಳಿಸಿದೆ. ಬಂಧಿತ ವ್ಯಕ್ತಿಯನ್ನು ಸೆಕ್ಸ್ ಖರೀದಿದಾರ ಎಂದು ಕರೆಯಲಾಗಿದೆ. ವೇಶ್ಯಾವಾಟಿಕೆ ಹಾಗೂ ಮಕ್ಕಳ ಅಪರಾದದ ಆರೋಪದಡಿ ಆತನನ್ನು ಬಂಧಿಸಲಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಮಕ್ಕಳ ಕಳ್ಳಸಾಗಣೆ ವಿರುದ್ಧ ಹೋರಾಟ ನಡೆಯುತ್ತಿದೆ. ಈ ವರ್ಷ ಆರಂಭದಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಇಂಥ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಲ್ಲದೆ ಡಜನ್ ಗಟ್ಟಲೆ ಜನರನು ರಕ್ಷಿಸಲಾಗಿದೆ. ಲಾಸ್ ಏಂಜಲೀಸ್ ಕೌಂಟಿಯ ಶೆರಿಫ್ ರಾಬರ್ಟ್ ಲೂನಾ ಅವರು 40 ಶಂಕಿತ ಲೈಂಗಿಕ ಕಳ್ಳಸಾಗಣೆದಾರರು, 271 ಶಂಕಿತ ಲೈಂಗಿಕ ಖರೀದಿದಾರರು ಸೇರಿದಂತೆ 539 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.