ಅಮೆರಿಕದ ಮೇರಿಲ್ಯಾಂಡ್ ನ ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಅವರ ಮನೆಯಿಂದ ಕನಿಷ್ಠ 125 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ಹಾವುಗಳಲ್ಲಿ ಅತ್ಯಂತ ವಿಷಕಾರಿ ನಾಗರಹಾವು ಮತ್ತು ಬ್ಲಾಕ್ ಮಾಂಬಾಗಳು ಸೇರಿವೆ. ವ್ಯಕ್ತಿಯ ಸಾವಿಗೆ ಇನ್ನು ಕಾರಣ ತಿಳಿದು ಬಂದಿಲ್ಲ.
ನೆರೆಮನೆಯವನು ಮೃತನನ್ನು, ಒಂದು ದಿನದಿಂದ ನೋಡಿರಲಿಲ್ಲ. ಏನೋ ಆಗಿರಬಹುದು ಎಂದು ಭಾವಿಸಿ ಆತನನ್ನು ನೋಡಲು ಮನೆಗೆ ಹೋದಾಗ ಅವನು ಪ್ರಜ್ಞಾಹೀನನಾಗಿ ನೆಲದ ಮೇಲೆ ಬಿದ್ದಿದ್ದನು, ತಕ್ಷಣ ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಎನ್‌ಬಿಸಿ ವರದಿ ಮಾಡಿದೆ.
ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಮನೆಗೆ ಆಗಮಿಸಿದಾಗ, ಆ ವ್ಯಕ್ತಿ ಸತ್ತು ಬಿದ್ದಿದ್ದ. ಅವನ ಶವವನ್ನು, 14 ಅಡಿ ಹಳದಿ ಬರ್ಮಾ ಹೆಬ್ಬಾವು ಸೇರಿದಂತೆ 125 ಹಾವುಗಳಿಂದ ಸುತ್ತುವರೆದಿರುವುದು ಕಂಡುಬಂದಿದೆ. ಅಷ್ಟಕ್ಕು ಅಲ್ಲಿ ಏನಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವಪರೀಕ್ಷೆಗಾಗಿ ವ್ಯಕ್ತಿಯ ದೇಹವನ್ನು ಬಾಲ್ಟಿಮೋರ್‌ನಲ್ಲಿರುವ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಗೆ ಸಾಗಿಸಲಾಗಿದೆ.
ಮೃತನ ಮನೆಯಲ್ಲಿದ್ದ 125 ಹಾವುಗಳನ್ನು ಸುರಕ್ಷಿತವಾಗಿಡಲಾಗಿದೆ. ಸುತ್ತಮುತ್ತಲಿನವರು ಹಾವುಗಳಿಂದ ಭಯಪಡುವ ಅಗತ್ಯವಿಲ್ಲ. ಎಲ್ಲಾ ಹಾವುಗಳನ್ನ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಆತನ ಮನೆಯಿಂದ ಹಾವುಗಳು ಹೊರಗೆ ಹೋಗಿವೆ ಎಂಬ ಭಯಪಡುವ ಅಗತ್ಯವಿಲ್ಲ. ಹಾವುಗಳ್ಯಾವು ತಪ್ಪಿಸಿಕೊಂಡು ಹೋಗಿಲ್ಲಾ ಎಂದು ಚಾರ್ಲ್ಸ್ ಕೌಂಟಿಯ ಅನಿಮಲ್ ಕಂಟ್ರೋಲ್‌ನ ವಕ್ತಾರರಾದ ಜೆನ್ನಿಫರ್ ಹ್ಯಾರಿಸ್ ಹೇಳಿದ್ದಾರೆ.