ನೀವು ಯಾವುದೇ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡುವ ಮೊದಲು ಯಾವಾಗಲೂ ಮೆನು ಕಾರ್ಡ್‌ನಲ್ಲಿನ ದರಗಳನ್ನು ಅಗತ್ಯವಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ನೀವು ದುಬಾರಿ ಮೊತ್ತ ತೆರಬೇಕಾದೀತು..
ಅಮೆರಿಕದ ನ್ಯೂಜೆರ್ಸಿಯಲ್ಲಿ ಡಿನ್ನರ್ ಡೇಟ್ ಗೆ ತೆರಳಿದ್ದ ಜೋಡಿಯೊಂದು ದರವನ್ನು ಸರಿಯಾಗಿ ಪರಿಶೀಲಿಸದೆ ಹೊಸ ಖಾದ್ಯವನ್ನು ಟ್ರೈ ಮಾಡಿದೆ. ಆದರೆ ಕೈಗೆ ಬಿಲ್ ಬಂದಾಗ ಅವರಿಗೆ ಹೃದಯಾಘಾತದ ಅನುಭವ ನೀಡಿದೆ. ಯಾಕೆಂದರೆ 45,000 ರೂ. ಬಿಲ್ ನೋಡಿ ಜೋಡಿ ಶಾಕ್ ಆಗಿದ್ದಾರೆ
ಜೆಫ್ರಿ ಪೈಜ್ ಅವರು ಜಪಾನೀಸ್ ಕೋಬ್ ಬೀಫ್ ಅನ್ನು ಆರ್ಡರ್ ಮಾಡಿದ್ದರು. ಅವರು ಕೋಬ್ 4 ಔನ್ಸ್‌ಗಳಿಗೆ $ 35 (ರೂ. 2500) ಮಾತ್ರ ನಿರೀಕ್ಷಿಸಿದ್ದರು. 5ಎ ಜಪಾನೀಸ್ ಕೋಬ್ ಅಮೆರಿಕನ್ ವಾಗ್ಯುಗಿಂತ ಅಗ್ಗವಾಗಿದೆ ಎಂದು ಯೋಚಿಸಿ, ಅವರು 12 ಔನ್ಸ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಕೊನೆಗೆ ಬಿಲ್ ಮೊತ್ತ ನೋಡಿ ಅವರು ದಂಗಾಗಿದ್ದಾರೆ.
ಬಿಲ್ ಅನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಅವನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ತಮಾಷೆ ಮಾಡಿದ್ದಾರೆ.