ವರ್ಜಿನಿಯಾ (ಅಮೆರಿಕ): ಭಾರತದಲ್ಲಿ ಲಾಟರಿ ನಿಷೇಧವಾಗಿದ್ದರೂ ಕೆಲ ದೇಶಗಳಲ್ಲಿ ಇವುಗಳನ್ನು ಅಧಿಕೃತವಾಗಿ ಮಾರಾಟ ಮಾಡಬಹುದು. ಅಂಥ ದೇಶಗಳಲ್ಲಿ ಒಂದು ಅಮೆರಿಕ. ಲಾಟರಿಯಿಂದ ಮನೆ, ಹೊಲ, ತೋಟ ಕಳೆದುಕೊಂಡಿರುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಆದರೆ ಕೆಲವೊಂದು ಅದೃಷ್ಟವಂತರಿಗೆ ಮಾತ್ರ ಇದು ಕೈ ಹಿಡಿದು ಬಿಡುತ್ತದೆ.
ಅಂಥದ್ದೇ ಒಬ್ಬ ವ್ಯಕ್ತಿ ವರ್ಜೀನಿಯಾ ಮೂಲದ ಡ್ಯಾನಿ ಜಾನ್ಸನ್. ಲಾಟರಿ ಎಂದರೆ ಈತನಿಗೆ ಅಲರ್ಜಿ. ಯಾವತ್ತೂ ಲಾಟರಿ ಖರೀದಿಸಿದವರಲ್ಲ. ಲಾಟರಿ ಹಣವನ್ನು ವ್ಯರ್ಥ ಮಾಡುತ್ತದೆ ಎನ್ನುವುದು ಇವನ ನಂಬಿಕೆ. ಆದರೂ ಆತನ ಸ್ನೇಹಿತ ಹೇಗಾದರೂ ಮಾಡಿ ಡ್ಯಾನಿಗೆ ಒಂದು ಲಾಟರಿ ಟಿಕೆಟ್ ಕೊಡಿಸಲೇಬೇಕು ಎಂದು ಪಣತೊಟ್ಟ. ಸ್ನೇಹಿತನ ಒತ್ತಾಯದ ಮೇರೆಗೆ ಡ್ಯಾನಿ ಒಂದು ಲಾಟರಿ ಖರೀದಿಸಿ ಈಗ ವೈರಲ್ ಆಗಿದ್ದಾನೆ!
ಇದಕ್ಕೆ ಕಾರಣ, ನ.5 ರಂದು ಲಾಟರಿ ಏಜೆನ್ಸಿಯ ವೆಬ್ಸೈಟ್ನಿಂದ ಈತ ಖರೀದಿ ಮಾಡಿರುವ ಲಾಟರಿಯಿಂದ ಡ್ಯಾನಿ ಕೋಟ್ಯಧೀಶ್ವರನಾಗಿದ್ದಾನೆ. ಆತನಿಗೆ $50,000 ( ಅಂದರೆ ಸುಮಾರು 40.83 ಲಕ್ಷ ರೂಪಾಯಿ) ಗೆದ್ದಿದ್ದಾನೆ. ನಂತರ ಇಷ್ಟಕ್ಕೆ ಸುಮ್ಮನಾಗದ ಆತ ನಂತರ ಪವರ್ ಪ್ಲೇ ಆಟವನ್ನು ಆಡಿದ್ದಾನೆ. ಇದರಿಂದ ಆತ ಲಾಟರಿ ಮೂರು ಪಟ್ಟು ಹೆಚ್ಚು ಹಣ ಗೆದ್ದಿದ್ದಾನೆ. ಇದರಿಂದ ಡ್ಯಾನಿ $150000 ( ಅಂದಾಜು 1.22 ಕೋಟಿ ರೂ.) ಜಾಕ್ ಪಾಟ್ ಗೆದ್ದುಕೊಂಡಿದ್ದಾನೆ. ಈತ ಸದ್ಯ ವೈರಲ್ ಆಗಿದ್ದು, ಹಲವರು ಅಭಿನಂದನೆ ಸಲ್ಲಿಸುತ್ತಿದ್ದಾರೆ.