ವ್ಯಕ್ತಿಯೊಬ್ಬ ದರೋಡೆ ಪ್ರಕರಣದಲ್ಲಿ ಮೂರು ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಪ್ರತಿ ಬಂಧನದ ನಂತರ ಪೊಲೀಸರ ಬಗ್ಗೆ ಹೆಮ್ಮೆಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ.
ಇಬ್ಬರಿಂದ ದರೋಡೆ ಮಾಡಿದ ಆರೋಪ ಹೊತ್ತಿರುವ ಯುನೈಟೆಡ್ ಸ್ಟೇಟ್ಸ್‌ನ 63 ವರ್ಷದ ನಿರಾಶ್ರಿತ ವ್ಯಕ್ತಿಯನ್ನು ಕೇವಲ 36 ಗಂಟೆಗಳಲ್ಲಿ ಮೂರನೇ ಬಾರಿಗೆ ಬಂಧಿಸಲಾಯಿತು. ಅಗಸ್ಟಿನ್ ಗಾರ್ಸಿಯಾ ಎಂಬಾತನನ್ನು ಮೊದಲಿಗೆ ಕ್ಷುಲ್ಲಕ ಕಳ್ಳತನದ ಆರೋಪದ ಮೇಲೆ ಬಂಧಿಸಲಾಯಿತು. ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಅವನನ್ನು ಬಿಡುಗಡೆಗೊಳಿಸಲಾಯಿತು.
ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ
ಮೂರನೇ ಬಾರಿಗೆ ಸೆರೆ ಸಿಕ್ಕಾಗ, ಗಾರ್ಸಿಯಾನನ್ನು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸಿಕ ಅನಾರೋಗ್ಯವೇ ಈತನ ಸಮಸ್ಯೆಯಾಗಿದೆ. ಹೀಗಾಗಿ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶರಾದ ವ್ಯಾಲೆಂಟಿನಾ ಅವರು ಅಗಸ್ಟಿನ್ ಗಾರ್ಸಿಯಾಗೆ 72 ಗಂಟೆಗಳ ಮಾನಸಿಕ ಮೌಲ್ಯಮಾಪನಕ್ಕೆ ಆದೇಶಿಸಿದ್ದಾರೆ. ನ್ಯೂಯಾರ್ಕ್ ನಗರದ ಶೆರಿಫ್ ಕಚೇರಿಯ ನಿಯೋಗಿಗಳು ಶಂಕಿತನನ್ನು ವಶಕ್ಕೆ ತೆಗೆದುಕೊಂಡು ಮೌಲ್ಯಮಾಪನಕ್ಕಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಅಗಸ್ಟಿನ್ ಗಾರ್ಸಿಯಾ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂದು ಅವರ ಸಹೋದರಿ ಜೋಸ್ ಗಾರ್ಸಿಯಾ ಹೇಳಿದ್ದಾರೆ. 1987ರಲ್ಲಿ ನಡೆದ ಘಟನೆ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ಜೋಸ್ ಗಾರ್ಸಿಯಾ ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ್ರೂ ಸಂಪೂರ್ಣ ಚಿಕಿತ್ಸೆ ಪಡೆಯದಿದ್ದಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.