ನ್ಯೂಯಾರ್ಕ್: ಸಾಹಸ ಉತ್ಸಾಹಿಗಳು ಪ್ಯಾರಾಸೈಲಿಂಗ್, ಬಂಗೀ ಜಂಪಿಂಗ್ ಮತ್ತು ಕಯಾಕಿಂಗ್‌ನಂತಹ ಚಟುವಟಿಕೆಗಳನ್ನು ಮಾಡಲು ಉತ್ಸುಕರಾಗಿರುತ್ತಾರೆ. ಆದರೆ ಅಮೆರಿಕದ ವ್ಯಕ್ತಿಯೊಬ್ಬರು ಕಯಾಕ್ ಮೂಲಕ ಜಲಪಾತದಿಂದ 300 ಅಡಿ ಕೆಳಗೆ ಇಳಿಯುವ ಮೂಲಕ ನಿಜವಾಗಿಯೂ ನಂಬಲಾಗದ ಕೆಲಸವನ್ನು ಮಾಡಿದ್ದಾರೆ.
ಅಮೆರಿಕದ ಫ್ರೀಸ್ಟೈಲ್ ಮತ್ತು ವೈಟ್ ವಾಟರ್ ಕಯಾಕಿಂಗ್ ಚಾಂಪಿಯನ್ ಡೇನ್ ಜಾಕ್ಸನ್ ಅವರು ಮೆಕ್ಸಿಕೋದ ಸ್ಯಾಂಟೋ ಡೊಮಿಂಗೊ ಗಾರ್ಜ್‌ನಲ್ಲಿ ಈ ಸಾಹಸ ಮಾಡಿದ್ದಾರೆ. 300 ಅಡಿಗಳಷ್ಟು ಜಲಪಾತದಲ್ಲಿ ಇಳಿದು ನಂಬಲಾಗದ ಸಾಧನೆಯನ್ನು ಸಾಧಿಸಿದ್ದಾರೆ.
ಮೇ 4 ರಂದು CNN ಟ್ವಿಟ್ಟರ್‌ನಲ್ಲಿ ವೀಡಿಯೊ ಶೇರ್ ಆಗಿದೆ. ಜಾಕ್ಸನ್ ಸಾಧನೆಯನ್ನು ವೀಕ್ಷಕರು ನಂಬಲು ಕಷ್ಟಕರವಾಗಿದೆ. ಇದನ್ನು 3.06 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದು ನಂಬಲಾಗದ ಸಾಧನೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.