2013ರ ಹಾರರ್ ಚಿತ್ರ ’ದಿ ಕಂಜೋರಿಂಗ್’ಗೆ ಪ್ರೇರಣೆ ಕೊಟ್ಟ ರೋಡ್ ದ್ವೀಪದ ಫಾರ್ಮ್‌ಹೌಸ್ ಒಂದು 1.2 ಮಿಲಿಯನ್ ಡಾಲರ್ ಬೆಲೆಗೆ ಮಾರಾಟಕ್ಕಿದೆ.
ಮಾಟ್ & ಚೇಸ್ ಸೋತೆಬೇಸ್ ಇಂಟರ್ನ್ಯಾಷನಲ್ ರಿಯಾಲ್ಟಿಯ ಪಟ್ಟಿಯಲ್ಲಿರುವ ಈ ಮನೆಯಲ್ಲಿ 14 ಕೋಣೆಗಳಿದ್ದು, 3,100 ಚದರ ಅಡಿ ವಿಸ್ತಾರದಲ್ಲಿ ಹಬ್ಬಿದೆ. ಅಮೆರಿಕದ ಅತ್ಯಂತ ಫೇಮಸ್ ಮನೆಗಳಲ್ಲಿ ಒಂದಾದ ಈ ಮನೆಯು 8.5 ಎಕರೆಯಷ್ಟು ವಿಶಾಲವಾಗಿದೆ.
“1800ರಲ್ಲಿ ವಾಸವಿದ್ದ ಬಾತ್‌ಶೆಬಾ ಶೆರ್ಮನ್ ಎಂಬಾತನ ಉಪಸ್ಥಿತಿಯಿಂದ ಈ ಮನೆ ಭಾರೀ ಖ್ಯಾತಿ ಪಡೆದಿದೆ. ಇಲ್ಲಿವರೆಗೂ ಲೆಕ್ಕವಿಲ್ಲದಷ್ಟು ಘಟನೆಗಳು ಈ ಮನೆಯಲ್ಲಿ ಜರುಗಿವೆ” ಎಂದು ಸೋತೆಬೇಸ್ ವರದಿ ತಿಳಿಸಿದೆ.
1970ರಲ್ಲಿ ಈ ಬಂಗಲೆಯಲ್ಲಿ ವಾಸವಿದ್ದ ಪೆರ‍್ರೋನ್ ಕುಟುಂಬದ ಅನುಭವಗಳನ್ನೇ ದಿ ಕಂಜೋರಿಂಗ್‌ನ ಹಂದರವನ್ನಾಗಿ ಮಾಡಿಕೊಳ್ಳಲಾಗಿದೆ.
2019ರಲ್ಲಿ 439,000ಕ್ಕೆ ಮಾರಾಟವಾದ ಈ ಮನೆಯನ್ನು ಖರೀದಿ ಮಾಡಿದ ಕುಟುಂಬವು ಅಲ್ಲಿನ ನಿಗೂಢವನ್ನು ಬೇಧಿಸಲೆಂದೇ ವಿಶೇಷವಾದ ಆಸಕ್ತಿ ಬೆಳೆಸಿಕೊಂಡು ರಾತ್ರಿ ಬಂದು ಇಲ್ಲಿ ತಂಗಲು ಕೋಣೆಗಳನ್ನು ಬಾಡಿಗೆಗೆ ಕೊಡುತ್ತಿತ್ತು.
ಇದಕ್ಕೂ ಮುನ್ನ ದೆವ್ವಗಳಿಗಿಂತಲೂ, ಚಿತ್ರ ನೋಡಿದ ಮಂದಿ ಕುತೂಹಲದಿಂದ ಪದೇ ಪದೇ ಆಸ್ತಿಯ ಸುತ್ತಲೂ ಅಡ್ಡಾಡುತ್ತಿದ್ದದ್ದೇ ಭಾರೀ ಕಿರಿಕಿರಿಯಾಗಿದೆ ಎಂದು ಮನೆಯ ಮಾಲೀಕರು ಹೇಳಿಕೊಂಡಿದ್ದರು.