ನೀವು ಕೂಡ ಅಮೆರಿಕದ ಗ್ರೀನ್ ಕಾರ್ಡ್ ಅಂದರೆ ಅಮೆರಿಕದ ಶಾಶ್ವತ ವೀಸಾ ಹೊಂದಬೇಕು ಎಂಬ ಆಸೆಯನ್ನು ಹೊಂದಿರುವವರಾಗಿದ್ದರೆ ನಿಮಗೊಂದು ಶುಭಸುದ್ದಿ ಇದೆ. ಏಕೆಂದರೆ ಗ್ರೀನ್ ಕಾರ್ಡ್ ಪಡೆಯುವವರಿಗಾಗಿ ಅಮೆರಿಕ ಸರ್ಕಾರವು ಹೊಸ ಅವಕಾಶವೊಂದು ನೀಡಲು ಮುಂದಾಗಿದೆ. ಆದರೆ ಈ ಹೊಸ ಅವಕಾಶವನ್ನು ಪಡೆಯಲು ನೀವು ದೊಡ್ಡ ಮೊತ್ತದ ಹಣವನ್ನೇ ವ್ಯಯಿಸಬೇಕಿದೆ.
ಅಂದಹಾಗೆ ಅಮೆರಿಕ ಶೀಘ್ರದಲ್ಲೇ ಒಂದು ಸೂಪರ್ ಫೀ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಬಯಸುವ ಭಾರತೀಯರ ಕನಸನ್ನು ನನಸು ಮಾಡಲು ಮುಂದಾಗಿದೆ.ಅಮೆರಿಕ ಹೌಸ್ ಜ್ಯುಡಿಷಿಯರಿ ಕಮಿಟಿಯು ರಿಕಾನ್ಸಿಲೇಷನ್ ಮಸೂದೆ ತಯಾರು ಮಾಡಿದೆ. ಇಲ್ಲಿಯವರೆಗೆ ಈ ಮಸೂದೆ ಅಂತಿಮವಾಗಿಲ್ಲ.ಈ ಬಿಲ್ನ ಮೇಲೆ ಚರ್ಚೆ ನಡೆಯುವುದು ಬಾಕಿ ಇದೆ. ಚರ್ಚೆಯ ಬಳಿಕ ಹೊಸ ನಿಬಂಧನೆಯಿಂದ ಹಣ ಬರುತ್ತದೆಯೇ ಇಲ್ಲವೇ ಅನ್ನೋದನ್ನು ನಿರ್ಧರಿಸಲಾಗುತ್ತದೆ.
1. ಸೂಪರ್ ಫೀಸ್ ಹೆಸರಿನಲ್ಲಿ ಎಷ್ಟು ಹಣ ನೀಡಬೇಕು..?
ಒಂದು ವೇಳೆ ನಿಮ್ಮ ಬಳಿ ಸೂಕ್ತ ಹಣ ಇದೆ ಎಂದಾದಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದೊಡ್ಡ ಸರದಿ ಸಾಲಿನಲ್ಲಿ ನಿಲ್ಲಬೇಕೆಂದಿಲ್ಲ. ನೀವು 5000 ಡಾಲರ್ ಅಂದರೆ ಹೆಚ್ಚು ಕಡಿಮೆ 3.5 ಲಕ್ಷ ರೂಪಾಯಿ ಸೂಪರ್ ಫೀಸ್ ನೀಡಬೇಕು.ಇದಾದ ಬಳಿಕ ನೀವೂ ಕೂಡ ಅಮೆರಿಕದ ನಾಗರಿಕರಾಗಬಹುದಾಗಿದೆ.
2. ಪ್ರತಿ ವರ್ಷ ಎಷ್ಟು ಜನರಿಗೆ ಸಿಗಲಿದೆ ಗ್ರೀನ್ ಕಾರ್ಡ್..?
ಅಮೆರಿಕದಿಂದ ಪ್ರತಿ ವರ್ಷ 1.40 ಲಕ್ಷ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಈ ಸಂಖ್ಯೆಯು ಕೇವಲ ಭಾರತೀಯರಿಗೆ ಮಾತ್ರ ಸಂಬಂಧಿಸಿದ್ದಲ್ಲ ಬದಲಾಗಿ ವಿಶ್ವದ ಮೂಲೆ ಮೂಲೆಯಿಂದ ಉದ್ಯೋಗಕ್ಕೆಂದು ಅಮೆರಿಕಕ್ಕೆ ಬರುವವರನ್ನು ಒಳಗೊಂಡಿದೆ.
3. ಪ್ರತಿ ದೇಶಕ್ಕೆ ನೀಡಲಾಗುವ ಗ್ರೀನ್ ಕಾರ್ಡ್ ಮಿತಿಯಲ್ಲಿ ಬದಲಾವಣೆ ಆಗಿದೆಯೇ.?
ಪ್ರಸ್ತುತ ಅಮೆರಿಕವು ಪ್ರತಿ ದೇಶಕ್ಕೆ 7 ಪ್ರತಿಶತ ಮಿತಿಯನ್ನು ಹೇರಿದೆ. ಅಂದರೆ ಒಂದು ವರ್ಷದಲ್ಲಿ ಒಂದು ದೇಶದ 7 ಪ್ರತಿಶತಕ್ಕಿಂತ ಹೆಚ್ಚು ಜನರಿಗೆ ಗ್ರೀನ್ ಕಾರ್ಡ್ ನೀಡಲಾಗುವುದಿಲ್ಲ. ಅಂದರೆ ಒಂದು ವರ್ಷದಲ್ಲಿ ಭಾರತದ 9800 ಮಂದಿ ಮಾತ್ರ ಗ್ರೀನ್ ಕಾರ್ಡ್ ಪಡೆಯಬಹುದು. ಹೊಸ ಮಸೂದೆಯಲ್ಲೂ ಈ ವಿಚಾರವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
4. ಇದರಿಂದ ಹೆಚ್ – 1ಬಿ ವೀಸಾದ ಮೇಲೆ ಪರಿಣಾಮ ಬೀರಬಹುದೇ..?
ಮಸೂದೆಯಲ್ಲಿ ಹೆಚ್ 1 ಬಿ ವಿಚಾರವಾಗಿ ಯಾವುದೇ ವಿಷಯವನ್ನೂ ಉಲ್ಲೇಖಿಸಲಾಗಿಲ್ಲ. ಹಾಗಾಗಿ ಹೆಚ್ 1 ಬಿ ಕೋಟಾ ಮೊದಲ ರೀತಿಯಲ್ಲೇ ಇರಬಹುದು ಎಂದು ಅಂದಾಜಿಸಬಹುದಾಗಿದೆ.ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಸ್ತುತ ಸಮಯದಲ್ಲಿ ಈ ಕೋಟಾದ ಮಿತಿ 65 ಸಾವಿರ ಆಗಿದೆ. 20 ಸಾವಿರ ಹೆಚ್ 1 ಬಿ ವೀಸಾಗಳನ್ನು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
5. ಪ್ರಸ್ತುತ ಭಾರತದಿಂದ ಗ್ರೀನ್ ಕಾರ್ಡ್ಗೆ ಕಾಯುತ್ತಿರುವವರ ಸಂಖ್ಯೆ ಎಷ್ಟಿರಬಹುದು..?
ಕ್ಯಾಟೋ ಇನ್ಸ್ಟಿಟ್ಯೂಟ್ನ ವಲಸೆ ನೀತಿ ವಿಶ್ಲೇಷಕ ಡೇವಿಡ್ ಜೆ ಬಿಯರ್ ಅಧ್ಯಯನದ ಪ್ರಕಾರ, ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರ ಪಟ್ಟಿ ಬಹಳವೇ ಉದ್ದವಾಗಿದೆ. ಭಾರತದಿಂದ ಬಂದ ಅರ್ಜಿಗಳ ಪಟ್ಟಿ ಕಳೆದ ವರ್ಷ ಏಪ್ರಿಲ್ನಲ್ಲಿಯೇ 7.41 ಲಕ್ಷ ತಲುಪಿದೆ. ಇವರು ಗ್ರೀನ್ ಕಾರ್ಡ್ಗಾಗಿ ಸರಿಸುಮಾರು 84 ವರ್ಷ ಕಾಯಬೇಕು..!