ಸಂಗೀತಕ್ಕೆ ಖಂಡಿತವಾಗಿ ಯಾವುದೇ ಭಾಷೆಯಿಲ್ಲ ಎಂಬ ಮಾತು ಆಗಿಂದಾಗೆ ಕೇಳಿರುತ್ತೇವೆ. ಹಾಗೆಯೇ ಮನಸ್ಸಿನ ಕರಿಛಾಯೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂಬ ಮಾತೂ ಸಹ ಒಪ್ಪುವಂಥದ್ದು.
ಈ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋ ವೈರಲ್ ಆಗಿದೆ. ಅಮೆರಿಕಾದಲ್ಲಿ ಯುವತಿಯೊಬ್ಬರು ಹಾರ್ಡಿ ಸಂಧು ಅವರ ಪ್ರಸಿದ್ಧ ಹಾಡು “ಬಿಜ್ಲೀ ಬಿಜ್ಲೀ ” ಅನ್ನು ತನ್ನ ವಯೋಲಿನ್ನಲ್ಲಿ ನುಡಿಸಿದ್ದು, ನೆಟ್ಟಿಗರ ಹೃದಯ ಬೆಚ್ಚಗೆ ಮಾಡಿದೆ.
ರಷ್ಯಾ ಸೇನೆ ದಾರಿ ತಪ್ಪಿಸಿದ ಉಕ್ರೇನ್ ರಸ್ತೆ ನಿರ್ವಹಣೆ ಕಂಪನಿ; ಮಾರ್ಗ ಸಂಕೇತ, ಬೋರ್ಡ್ ಗಳನ್ನು ತೆಗೆದು ಹಾಕಿ ಹೋರಾಟ
ರಸ್ತೆ ಪಕ್ಕದಲ್ಲಿ ನಿಂತು ವಯೋಲಿನ್ ನುಡಿಸುತ್ತಿದ್ದು, ಇದನ್ನು ಬಹುಮಂದಿ ಮೆಚ್ಚಿಕೊಂಡಿದ್ದಾರೆ. ರಾಗ್ ಫ್ಯೂಷನ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೊವನ್ನು ಮೂಲತಃ ವಯೋಲಿನ್ ಆಟಗಾರ್ತಿ ಕರೋಲಿನಾ ಪ್ರೊಟ್ಸೆಂಕೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಉಕ್ರೇನ್ ಮೂಲದ ಅಮೇರಿಕನ್ ವಯೋಲಿನ್ ವಾದಕರಾಗಿದ್ದಾರೆ.
ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ, ಬಾಲಕಿಯು ತನ್ನ ವಯೋಲಿನ್ ಮೂಲಕ ತನ್ಮಯತೆಯಿಂದ ಆಕರ್ಷಕವಾಗಿ ಹಾಡು ಪ್ರಸ್ತುತಪಡಿಸುವುದನ್ನು ಕಾಣಬಹುದು. ಅಲ್ಲಿ ಓಡಾಡುತ್ತಿದ್ದ ಜನರೂ ಸಹ ಖುಷಿ ವ್ಯಕ್ತಪಡಿಸುವದನ್ನು ಕಾಣಬಹುದು.
ಈ ವಿಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ನೂರಾರು ಕಾಮೆಂಟ್ ಬಂದಿವೆ.
https://www.youtube.com/watch?v=CzoVhnuW3G8&feature=youtu.be