alex Certify Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….!

ಫಾಸ್ಟ್​ ಫುಡ್​ ರೆಸ್ಟೊರೆಂಟ್​ನಲ್ಲಿ ಆರ್ಡರ್​ ಮಾಡಿದ ಫುಡ್​ನಲ್ಲಿ ತಾನು ನಿರೀಕ್ಷಿಸದೇ ಇದ್ದ ವಸ್ತುಕಂಡು ಹುಡುಗಿಯೊಬ್ಬಳು ಶಾಕ್​ಗೆ ಒಳಗಾಗಿದ್ದಾಳೆ.

ಬ್ಲೇಜ್​ ಹಾಗೂ ಆಕೆಯ ತಾಯಿ ಜೆನ್​ ಹಾಲಿಫೀಲ್ಡ್​ ರ್ಬಗರ್​ ಕಿಂಗ್​ ಔಟ್ಲೆಟ್​ನಿಂದ ಚಿಕನ್​ ಫ್ರೈ ಮತ್ತು ಜಲಪೆನೊ ಪಾಪ್ಪರ್​ಗಳನ್ನು ಆರ್ಡರ್​ ಮಾಡಿದ್ದಳು.

ಬ್ಲೇಜ್​ ತಮ್ಮ ಮನೆಗೆ ಸರ್ವ್​ ಮಾಡಲಾದ ಚಿಕನ್​ ಫ್ರೈ
ಇದ್ದ ಬ್ಯಾಗ್​ನಿಂದ ಸಿಗರೇಟ್ ವಾಸನೆಯನ್ನು ಗ್ರಹಿಸಿ ತಾಯಿ ಗಮನಕ್ಕೆ ತಂದಳು. ಆದರೆ ತಾಯಿ ತಪ್ಪಾಗಿ ಭಾವಿಸಿ, ಕೆಲವೊಮ್ಮೆ ಆಕೆ ಸ್ವಲ್ಪ ಡ್ರಾಮಾ ಮಾಡುತ್ತಾಳೆಂದು ‘ಸಿಗರೇಟ್​ ಇಲ್ಲ, ಏನೂ ಇಲ್ಲ’ ಎಂದು ಹೇಳಿದ್ದಾರೆ.

ಆದರೆ, ಇಬ್ಬರೂ ಸುಮಾರು ಅರ್ಧದಷ್ಟು ಫ್ರೈ ತಿಂದು ಮುಗಿಸಿದ ನಂತರ, ಬ್ಲೇಜ್​‌ಗೆ ಮೆಂಥಾಲ್​ ಸಿಗರೇಟ್​ ಕಂಡು ಆಘಾತ ಮತ್ತು ಅಸಹ್ಯ ಉಂಟಾಯಿತು. ಏಕೆಂದರೆ ಆ ಫ್ರೈ ಇದ್ದ ಬ್ಯಾಗ್​ನಲ್ಲಿ ಅರ್ಧ ಸುಟ್ಟ ಸಿಗರೇಟು ಹೊಗೆಯಾಡುತ್ತಿತ್ತು.

ಇದರ ಬೆನ್ನಲ್ಲೇ ಹೋಲಿಫೀಲ್ಡ್​ ರೆಸ್ಟೊರೆಂಟ್​ಗೆ ಕರೆ ಮಾಡಿ ಸಿಬ್ಬಂದಿಗೆ ಘಟನೆಯನ್ನು ವಿವರಿಸಿದ್ದಾರೆ. ವರದಿಯ ಪ್ರಕಾರ, ಆಕೆಯ ಫುಡ್​ಗೆ ಮರುಪಾವತಿ ನೀಡಲಾಯಿತು.

ಆದರೆ, ಸಾಕ್ಷಿಯಾಗಿ ಫ್ರೈರೈಸ್​ ಮತ್ತು ಸಿಗರೇಟ್​ ಅನ್ನು ಜಿಪ್​ಲಾಕ್​ ಬ್ಯಾಗ್​ನಲ್ಲಿ ಅವರು ಸಂರಕ್ಷಿಸಿದ್ದಾರೆ. ಹಾಗೆಯೇ, ತಾನು ಯಾವುದೇ ಮರುಪಾವತಿಯನ್ನು ಬಯಸುವುದಿಲ್ಲ. ತಪ್ಪು ಒಪ್ಪಿಕೊಳ್ಳುವಂತೆ ಆಕೆ ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ಬರ್ಗರ್ ಕಿಂಗ್​ನ ಸ್ಪೋಕ್​ಪರ್ಸನ್​, ಔಟ್​ಲೆಟ್​ಗೆ ತೆರಳಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...