ಅಮೆರಿಕದ ವಿಸ್ಕಾನ್ಸಿನ್‌ನ ಕ್ರಿಶ್ಚಿಯನ್ ಶಾಲೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಮ್ಯಾಡಿಸನ್ ಪೊಲೀಸ್ ಮುಖ್ಯಸ್ಥ ಸೀನ್ ಬಾರ್ನ್ಸ್ ಪ್ರಕಾರ, ಶಂಕಿತ ಶೂಟರ್ ವಿದ್ಯಾರ್ಥಿನಿ ಸಹ ಮೃತಪಟ್ಟವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.
ವಿಸ್ಕಾನ್ಸಿನ್‌ನ ರಾಜಧಾನಿ ಮ್ಯಾಡಿಸನ್‌ನಲ್ಲಿರುವ ಅಬಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಕೇವಲ 3 ಮೈಲಿಗಳು (5 ಕಿಲೋಮೀಟರ್) ದೂರದಲ್ಲಿ ತರಬೇತಿಯಲ್ಲಿದ್ದ ಮೊದಲ ರಕ್ಷಣಾ ಸಿಬ್ಬಂದಿ ಶಾಲೆಗೆ ಧಾವಿಸಿ ಬಂದಿದ್ದಾರೆ. ಶೂಟರ್ 17 ವರ್ಷದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ಆಗಮಿಸಿದಾಗ ಶೂಟರ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅಬಂಡಂಟ್ ಲೈಫ್ ನಾನ್‌ಡೆನೋಮಿನೇಷನಲ್ ಕ್ರಿಶ್ಚಿಯನ್ ಶಾಲೆಯಾಗಿದೆ. ಸುಮಾರು 390 ವಿದ್ಯಾರ್ಥಿಗಳನ್ನು ಹೊಂದಿದೆ. ಶೂಟೌಟ್ ಪ್ರಕರಣ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆಘಾತವನ್ನುಂಟು ಮಾಡಿದೆ.