
ಕೆಲವರಿಗೆ ನಿರಂತರ ಪ್ರಯಾಣವೇ ತಮ್ಮ ಜೀವನವಾಗಲಿ ಎಂಬ ಬಯಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪರ್ ವ್ಯಾನ್, ಬಸ್, ಎಸ್‌ಯುವಿಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿಕೊಂಡು ದೇಶ-ವಿದೇಶ ಸುತ್ತುವ ಅನೇಕ ಮಂದಿಯನ್ನು ಯೂಟ್ಯೂಬ್‌ನಲ್ಲಿ ಸಾಕಷ್ಟು ನೋಡಿದ್ದೇವೆ.
ಅಮೆರಿಕದ ಐಯರ್ಲಿ ಕುಟುಂಬ ಈ ವರ್ಗಕ್ಕೆ ಸೇರಿದೆ. ಡಬಲ್ ಡೆಕರ್ ಬಸ್ ಒಂದನ್ನೇ ತಮ್ಮ ಮನೆಯನ್ನಾಗಿ ಮಾರ್ಪಾಡು ಮಾಡಿಕೊಂಡಿದೆ ಈ ಕುಟುಂಬ. ಈ ಮೊಬೈಲ್ ಮನೆಯ ವಿಡಿಯೋ ಪರಿಚಯವನ್ನು ಇನ್‌ಸ್ಟಾಗ್ರಾಂನಲ್ಲಿ ಮಾಡಲಾಗಿದೆ.
ಡೇನ್ ಐಯರ್ಲಿ ತಮ್ಮ ಚಲಿಸುವ ಮನೆಯ ಟೂರ್ ತೋರಿಸಿದ್ದು, ಅದು ಎಷ್ಟರ ಮಟ್ಟಿಗೆ ಸುಸಜ್ಜಿತವಾಗಿದೆ ಎಂದು ಪರಿಚಯಿಸಿದ್ದಾರೆ. ಮಿನಿ ಕಚೇರಿ, ರೆಫ್ರಿಜರೇಟರ್, ಅಡುಗೆಯ ಜಾಗ, ಶವರ್, ವಾಷಿಂಗ್ ಮಶಿನ್ ಸೇರಿದಂತೆ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಸಕಲ ಸೌಲಭ್ಯಗಳನ್ನೂ ಈ ಬಸ್ಸು ಒಳಗೊಂಡಿದೆ.
https://youtu.be/gGi_Q4re0rA