ಅಮೇರಿಕದಲ್ಲಿ ಸೆಪ್ಟೆಂಬರ್ 11 ರಂದು ನಡೆದ ದುರಂತಕ್ಕೆ ಇಪತ್ತು ವರ್ಷಗಳಾಗಿದ್ದು , ಇತ್ತೀಚೆಗಷ್ಟೇ ಅಮೇರಿಕದ ಅಧ್ಯಕ್ಷ ಜೋಬೈಡೆನ್ ತಮ್ಮ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದಾರೆ.
ಇತ್ತ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೇರಿಕ ದೇಶವನ್ನು ಮುನ್ನಡೆಸಿದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಇವರುಗಳು ತಮ್ಮ ಪತ್ನಿಯರೊಂದಿಗೆ ಸೇರಿ ಅಮೆರಿಕಾಗೆ ಬಂದಿಳಿದ ಸಹಸ್ರಾರು ಆಫ್ಘಾನ್ ನಿರಾಶ್ರಿತರ ಸಹಾಯಕ್ಕೆ ನಿಂತಿದ್ದಾರೆ.
ಆಫ್ಘಾನಿ ನಿರಾಶ್ರಿತರಿಗೆಂದೇ ‘ Welcome US ‘ ಎಂಬ ಗುಂಪೊಂದು ಸಹಾಯಕ್ಕೆ ನಿಂತಿದ್ದು , ಈ ಮಾಜಿ ಅಧ್ಯಕ್ಷರು ಮತ್ತು ಅವರ ಪತ್ನಿಯರು ಈ ಗುಂಪಿನೊಂದಿಗೆ ಕೈಜೋಡಿಸಿದ್ದಾರೆ. ಈ ಗುಂಪಿನಲ್ಲಿ ಅನೇಕ ಉದ್ಯಮಿಗಳು ಕೂಡ ಸೇರಿದ್ದಾರೆ.
ಇಂದು ವೆಬ್ ಸೈಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೆರಿಕ ದೇಶದ ಪ್ರಜೆಗಳು ಆನ್ ಲೈನ್ ಮೂಲಕ ಹಣ ಕಳಿಸಬಹುದು ಅಥವಾ ಮನೆ ಬಾಡಿಗೆ ಕಟ್ಟಲು ಮೊಬೈಲ್ ಆಪ್ ಮುಖಾಂತರ ನಿರಾಶ್ರಿತರಿಗೆ ಸೂರು ಕೂಡ ನೀಡಬಹುದು. ಈ ವೆಬ್ ಸೈಟ್ ಲಾಗಿನ್ ಆದಲ್ಲಿ, ನಿರಾಶ್ರಿತರಿಗೆ ಅನೇಕ ರೀತಿಯ ಸಹಾಯ ಮಾಡಲು ದಾನಿಗಳೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಬುಷ್ ಅವರ ಅಧಿಕಾರಿ ಜಾನ್ ಬ್ರಿಡ್ಜ್ ಲ್ಯಾಂಡ್ ಅವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಈಗಾಗಲೇ ಸಾವಿರಾರು ಜನರು ಆಫ್ಘಾನಿಸ್ತಾನದಿಂದ ಅಮೇರಿಕ ದೇಶಕ್ಕೆ ಬಂದಿಳಿದಿದ್ದಾರೆ. ಇವರುಗಳು ಈ ಹಿಂದೆ ಅಮೆರಿಕದೊಂದಿಗೆ ಕೆಲಸ ಮಾಡುತ್ತಿದ್ದರು. ಮುಂದೆ, ತಾಲಿಬಾನಿನೊಂದಿಗೆ ಅಫ್ಘಾನಿಸ್ಥಾನದಲ್ಲಿ ನೆಲಸುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು. “ಈ ಹಿಂದೆ ಇವರುಗಳು ನಮ್ಮ ಸಹಾಯಕ್ಕೆ ನಿಂತಿದ್ದರು. ಈಗ ನಮ್ಮ ಸರದಿ ” ಎಂದು ಬುಷ್ ಮತ್ತು ಆತನ ಪತ್ನಿ ಲಾರಾ ತಿಳಿಸಿದ್ದಾರೆ.
BIG NEWS: ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಅಮೆರಿಕಾದಲ್ಲಿ ಈಗ ಸ್ಥಳೀಯ ಹಾಗೂ ರಾಷ್ಟ್ರ ನಾಯಕರು ನಿರಾಶ್ರಿತರಿಗೆ ಸ್ವಾಗತ ಕೋರುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಕಾಲಾವಧಿಯಲ್ಲಿ ಹೊರ ದೇಶದಿಂದ ಅಮೆರಿಕಾಗೆ ಬರುವವರಿಗೆ ಅನಾನುಕೂಲವಾಗುವಂತಹ ಕಾನೂನು ಮಾಡಿದ್ದು, ಇದನ್ನು ಜೋ ಬಿಡೆನ್ ಅಧಿಕಾರಕ್ಕೆ ಬಂದ ನಂತರ ಬದಲಾಯಿಸಿದ್ದಾರೆ.
Welcome.US ಈಗಾಗಲೇ ಸುಮಾರು 280 ಸಂಘ ಸಂಸ್ಥೆಗಳು ಹಾಗು ಮೈಕ್ರೋ ಸಾಫ್ಟ್, ಸ್ಟಾರ್ ಬಕ್ಸ್ ನಂತಹ ಬೃಹತ್ ಕಂಪನಿಗಳು ಕೈಜೋಡಿಸಿದ್ದಾರೆ. ಬಿಡೆನ್ ಸರ್ಕಾರವು ಸೈನ್ಯದ ಶಿಬಿರದ ಬಳಿ, ವಿಮಾನ ನಿಲ್ದಾಣದ ಹತ್ತಿರ ಸುಮಾರು 50 ಸಾವಿರ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೆಲೆಸಲು ತಯಾರಿ ಮಾಡಿಕೊಂಡಿದ್ದಾರೆ.