ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಅಂತಿಮ ಹಂತಕ್ಕೆ ಬಂದಿದೆ.
ಅಮೆರಿಕದ 46 ನೇ ಅಧ್ಯಕ್ಷರ ಆಯ್ಕೆ ರೋಚಕ ಹಂತ ತಲುಪಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ 264 ಮತಗಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 214 ಮತ ಪಡೆದಿದ್ದಾರೆ.
ಫಲಿತಾಂಶ ಘೋಷಣೆಯಾಗುವ ಮೊದಲೇ ಗೆದ್ದಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಫಲಿತಾಂಶವನ್ನು ಒಪ್ಪುವುದಿಲ್ಲ. ಕೋರ್ಟ್ ಗೆ ಹೋಗುತ್ತೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಮೆರಿಕದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದು, ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಬೇಕಿದೆ. ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯಲಾಗುತ್ತದೆ. 538 ಸ್ಥಾನಗಳಲ್ಲಿ ಬಹುಮತಕ್ಕೆ 270 ಮತಗಳು ಬೇಕಿದೆ. ಜೋ ಬೈಡನ್ 264 ಮತ ಗಳಿಸಿದ್ದು, ಅವರು ಅಧ್ಯಕ್ಷರಾಗಲು ಇನ್ನು ಕೇವಲ ಆರೇ ಆರು ಎಲೆಕ್ಟೋರಲ್ ಮತಗಳು ಬೇಕಿದೆ. ಚುನಾವಣೆ ಫಲಿತಾಂಶ ಕುತೂಹಲದ ಕ್ಲೈಮ್ಯಾಕ್ಸ್ ತಲುಪಿದ್ದು ಬಹುತೇಕ ಬೈಡೆನ್ ಅವರೇ ಅಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗಿದೆ.